ಶಸ್ತ್ರಚಿಕಿತ್ಸೆಗೊಳಗಾದ ಟೀಂ ಇಂಡಿಯಾ ವೇಗಿ ಟಿ ನಟರಾಜನ್

ಬುಧವಾರ, 28 ಏಪ್ರಿಲ್ 2021 (10:19 IST)
ಮುಂಬೈ: ಐಪಿಎಲ್ ವೇಳೆ ಗಾಯಗೊಂಡಿದ್ದ ಟೀಂ ಇಂಡಿಯಾ ಯುವ ವೇಗಿ ಟಿ ನಟರಾಜನ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.


ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುವ ನಟರಾಜನ್ ಗಾಯಗೊಂಡ ಕಾರಣ ಐಪಿಎಲ್ ನಿಂದ ಹೊರಬಿದ್ದಿದ್ದರು. ನಿನ್ನೆ ಶಸ್ತ್ರಚಿಕಿತ್ಸೆಗೊಳಗಾದ ಅವರು ಬಿಸಿಸಿಐ, ವೈದ್ಯಕೀಯ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಆದಷ್ಟು ಬೇಗ ಚೇತರಿಸಿಕೊಂಡು ಮತ್ತಷ್ಟು ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುವುದಾಗಿ ನಟರಾಜನ್ ಹೇಳಿಕೊಂಡಿದ್ದಾರೆ. ಮುಂಬರುವ ವಿಶ್ವಕಪ್ ಟಿ20 ಗಮನದಲ್ಲಿಟ್ಟುಕೊಂಡು ನಟರಾಜನ್ ಬೇಗನೇ ಚೇತರಿಸಿಕೊಂಡು ಕ್ರಿಕೆಟ್ ಗೆ ಮರಳುವುದು ಮುಖ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ