ಭಾರತ-ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟಿ20 ಸರಣಿ

ಶುಕ್ರವಾರ, 6 ಡಿಸೆಂಬರ್ 2019 (09:40 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗಲಿದೆ. ಒಟ್ಟು ಮೂರು ಪಂದ್ಯಗಳ ಸರಣಿಗೆ ಇಂದು ಹೈದರಾಬಾದ್ ನಲ್ಲಿ ಚಾಲನೆ ಸಿಗಲಿದೆ.


ಈಗಾಗಲೇ ಬಾಂಗ್ಲಾ, ದ.ಆಫ್ರಿಕಾ ವಿರುದ್ಧ ಸಾಲು ಸಾಲು ಸರಣಿ ಗೆದ್ದು ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ವಿಂಡೀಸ್ ಮತ್ತೊಂದು ಸುಲಭ ತುತ್ತು ಎನ್ನಬಹುದು.

ಆದರೆ ಇಲ್ಲಿ ಪಂದ್ಯ ನಡೆಯುವುದಕ್ಕೆ ಹವಾಮಾನ ತಿಳಿಯಾಗಿದ್ದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ