ಉದ್ದೀಪನಾ ಔಷಧ ತೆಗೆದುಕೊಂಡು ಸಿಕ್ಕಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮಂಗಳವಾರ, 9 ಜನವರಿ 2018 (17:32 IST)
ಮುಂಬೈ: ಬರೋಡ ಕ್ರಿಕೆಟಿಗ, ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಪೋಟಕ ಫಿನಿಶರ್ ಎಂದೇ ಖ್ಯಾತಿ ಗಳಿಸಿದ್ದ ಯೂಸಫ್ ಪಠಾಣ್ ಉದ್ದೀಪನಾ ಔಷಧ ಪರೀಕ್ಷೆಯಲ್ಲಿ ವಿಫಲರಾದ ಹಿನ್ನಲೆಯಲ್ಲಿ ಕ್ರಿಕೆಟ್ ನಿಂದ ಜನವರಿ ಅಂತ್ಯದವರೆಗೆ ಅಮಾನತುಗೊಂಡಿದ್ದಾರೆ.
 

ವಾಡಾ ನಿಷೇಧಿತ ಔಷಧಗಳ ಪಟ್ಟಿಯಲ್ಲಿರುವ ಔಷಧವೊಂದನ್ನು ಸೇವಿಸಿದ ತಪ್ಪಿಗೆ ಯೂಸಫ್ ಪಠಾಣ್ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ವರ್ಷ ಮಾರ್ಚ್ ನಲ್ಲಿ ಅವರು ಉಸಿರಾಟದ ಸೋಂಕು ರೋಗವೊಂದಕ್ಕೆ ಈ ಔಷಧ ಸೇವಿಸಿದ್ದರು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ತನ್ನ ತಪ್ಪನ್ನು ಒಪ್ಪಿಕೊಂಡಿರುವ ಯೂಸಫ್ ಪಠಾಣ್, ಕಣ್ತಪ್ಪಿನಿಂದಾಗಿ ಈ ಔಷಧ ತನಗೆ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು ಐದು ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಪಠಾಣ್ ಕಳೆದ ಆಗಸ್ಟ್ ನಿಂದ ಅಮಾನತಿನಲ್ಲಿದ್ದಾರೆ. ಇದು ಜನವರಿ 14 ರಂದು ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ