ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಅಂಬುಟಿ ರಾಯುಡು ಹಿರಿಯ ನಾಗರಿಕರೊಂದಿಗೆ ಬೀದಿಯಲ್ಲಿ ಹಲ್ಲೆ ಮಾಡಲು ಹೋಗಿ ಸುದ್ದಿಯಾಗಿದ್ದಾರೆ.
ಟೀಂ ಇಂಡಿಯಾ ಏಕದಿನ ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಆಟಗಾರನಾಗಿರುವ ರಾಯುಡು ಉಪ್ಪಾಳ್ ನಲ್ಲಿರುವ ರಾಜೀವ್ ಗಾಂಧಿ ಸ್ಟೇಡಿಯಂಗೆ ಕಾರಿನಲ್ಲಿ ವೇಗವಾಗಿ ಹೋಗಿದ್ದನ್ನು ವಾಕಿಂಗ್ ಹೋಗುತ್ತಿದ್ದ ಹಿರಿಯ ನಾಗರಿಕರು ಪ್ರಶ್ನಿಸಿದ್ದರು.
ಇದರಿಂದ ಕೆರಳಿದ ರಾಯುಡು ಕಾರಿನಿಂದ ಇಳಿದು ಹಿರಿಯ ನಾಗರಿಕರ ಜತೆ ಜಗಳವಾಡಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ನಾಗರಿಕರ ಇವರ ಜಗಳ ಬಿಡಿಸಿದರು. ಕೊನೆಗೆ ರಾಯುಡು ತಮ್ಮ ಕಾರಿನಲ್ಲಿ ಮೈದಾನದತ್ತ ತೆರಳಿದರು.