ಪುಣೆ: ಇಂದಿನ ದಿನ ಭಾರತದ ಸ್ಪಿನ್ನರ್ ಗಳದ್ದೇ ಮೆರೆದಾಟವಿರಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಅದನ್ನು ತಲೆಕೆಳಗು ಮಾಡುವಂತೆ ಉಮೇಶ್ ಯಾದವ್ ಇಂದು ಶ್ರೇಷ್ಠ ಪ್ರದರ್ಶನವಿತ್ತರು.
ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ 2012 ರಲ್ಲಿ ಪರ್ತ್ ನಲ್ಲಿ 93 ರನ್ ನೀಡಿ 5 ವಿಕೆಟ್ ಗಳಿಸಿದ್ದೇ ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ. ಆದರೆ ಇಂದಿನ ದಿನ ನಾಲ್ಕು ವಿಕೆಟ್ ಕಿತ್ತಿರುವ ಯಾದವ್ ಗೆ ನಾಳೆ ಆ ಅವಕಾಶವಿದೆ. ಯಾಕೆಂದರೆ ಆಸ್ಟ್ರೇಲಿಯಾದ ಒಂದು ವಿಕೆಟ್ ಕೀಳಲು ಬಾಕಿಯಿದೆ. ನಾಳೆ ಬೆಳಿಗ್ಗೆಯೇ ಅದು ಉಮೇಶ್ ಪಾಲಾದರೆ ಅವರದು ಜೀವನ ಶ್ರೇಷ್ಠ ಸಾಧನೆಯಾಗಲಿದೆ.
ಅಪಾಯಕಾರಿ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ರನ್ನು ಬೌಲ್ಡ್ ಮಾಡುವ ಮೂಲಕ ವಿಕೆಟ್ ಬೇಟೆ ಶುರು ಮಾಡಿದ ಯಾದವ್ ಐದನೇ ಬಾರಿ ವಾರ್ನರ್ ವಿಕೆಟ್ ಪಡೆದ ದಾಖಲೆ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ