ಭಾರತ-ಆಸೀಸ್ ಟೆಸ್ಟ್: ಉಮೇಶ್ ಯಾದವ್ ಗೆ ಗಾಯ

ಸೋಮವಾರ, 28 ಡಿಸೆಂಬರ್ 2020 (10:39 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾಕ್ಕೆ ವೇಗಿ ಉಮೇಶ್ ಯಾದವ್ ರೂಪದಲ್ಲಿ ಆತಂಕ ಬಂದೆರಗಿದೆ.

 

ಇಂದು ಆಸ್ಟ್ರೇಲಿಯಾದ ಮೊದಲ ವಿಕೆಟ್ ಕಿತ್ತು ಆಘಾತ ನೀಡಿದ್ದ ಉಮೇಶ್ ಯಾದವ್ ಬೌಲಿಂಗ್ ಮಾಡುವಾಗ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣವೇ ಅವರು ಫಿಸಿಯೋ ಸಹಾಯದಿಂದ ಮೈದಾನದಿಂದ ಹೊರನಡೆದಿದ್ದಾರೆ. ಅವರ ಮೊಣಕಾಲಿಗೆ ಗಾಯವಾಗಿದೆ. ಇದು ಭಾರತಕ್ಕೆ ದೊಡ್ಡ ಆಘಾತವೇ ಸರಿ. ಅವರ ಗಾಯ ಗಂಭೀರವಾಗಿದೆಯೇ ಅಥವಾ ಮತ್ತೆ ಬೌಲಿಂಗ್ ಗೆ ಮರಳಲಿದ್ದಾರೆಯೇ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ