ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಈಗ ರಾಷ್ಟ್ರೀಯ ವಿಲನ್ !

ಸೋಮವಾರ, 25 ಫೆಬ್ರವರಿ 2019 (10:40 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಎರಡು ಸತತ ಬೌಂಡರಿ ಬಿಟ್ಟುಕೊಟ್ಟು ಟೀಂ ಇಂಡಿಯಾ ಸೋಲಿಗೆ ಕಾರಣರಾದ ವೇಗಿ ಉಮೇಶ್ ಯಾದವ್ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.


ಟ್ವಿಟರ್ ನಲ್ಲಿ ಉಮೇಶ್ ಯಾದವ್ ರನ್ನು ಟ್ರೋಲ್ ಮಾಡಿರುವ ಅಭಿಮಾನಿಗಳು ‘ಉಮೇಶ್ ರಾಷ್ಟ್ರೀಯ ವಿಲನ್’ ಎಂದು ಜರೆದಿದ್ದಾರೆ.

ಇನ್ನು ಕೆಲವರು ಹನುಮಂತಹ ಗದೆ ತೆಗೆದುಕೊಂಡ ವ್ಯಕ್ತಿಯ ಫೋಟೋ ಪ್ರಕಟಿಸಿ ಅಭಿಮಾನಿಗಳು ಈಗ ಉಮೇಶ್ ಮನೆ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ಬೇರೆ ಬೇರೆ ವಿಡಿಯೋ, ಫೋಟೋಗಳ ಮೂಲಕ ಉಮೇಶ್ ಯಾದವ್ ರನ್ನು ವ್ಯಂಗ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ