ಐಪಿಎಲ್ ನಲ್ಲಿ ಕೆಟ್ಟ ದಾರಿ ಹಿಡಿಯದಂತೆ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ವಾರ್ನಿಂಗ್
ಸೋಮವಾರ, 25 ಫೆಬ್ರವರಿ 2019 (09:11 IST)
ವಿಶಾಖಪಟ್ಟಣ: ಆಸ್ಟ್ರೇಲಿಯಾ ಸರಣಿ ಮುಗಿದೊಡನೆ ಐಪಿಎಲ್ ಕ್ರಿಕೆಟ್ ಆರಂಭವಾಗಲಿದೆ. ವರ್ಣರಂಜಿತ ಕೂಟದಲ್ಲಿ ಟೀಂ ಇಂಡಿಯಾ ಆಟಗಾರರು ಬೇರೆ ಬೇರೆ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಐಪಿಎಲ್ ಎಂದರೇ ಬೆಟ್ಟಿಂಗ್, ಪಾರ್ಟಿ ಇತ್ಯಾದಿ ಥಳುಕು ಬಳುಕಿನ ಲೋಕಕ್ಕೆ ಎಂಟ್ರಿ ಕೊಟ್ಟಂತೆ. ಆದರೆ ಆಟಗಾರರು ಹಾದಿ ತಪ್ಪಿ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬುದ್ಧಿ ಮಾತು ಹೇಳಿದ್ದಾರೆ.
‘ಐಪಿಎಲ್ ಎಂದರೆ ಅಲ್ಲಿ ಹಾದಿ ತಪ್ಪಲು ಹಲವು ಅಂಶಗಳಿರುತ್ತವೆ. ಆದರೆ ಆಟಗಾರರು ತಮ್ಮ ಮನಸ್ಸನ್ನು ಆಟದ ಹೊರತು ಬೇರೆ ಕಡೆ ಹೊರಳದಂತೆ ನೋಡಿಕೊಳ್ಳಬೇಕು’ ಎಂದು ಕೊಹ್ಲಿ ಎಚ್ಚರಿಸಿದ್ದಾರೆ. ಐಪಿಎಲ್ ಮುಗಿದ ಬಳಿಕ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಹೀಗಾಗಿ ನಾಯಕ ಕೊಹ್ಲಿ ತಮ್ಮ ಪ್ರಮುಖ ಆಟಗಾರರ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ