ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ರವಿ ಶಾಸ್ತ್ರಿ ಮುಂತಾದವರ ಜತೆ ಅಖಾಡಕ್ಕೆ ಇಳಿದಿದ್ದಾರೆ. ತಾವು ಇಂದು ಬೆಳಿಗ್ಗೆ ಅರ್ಜಿ ಸಲ್ಲಿಸಿದ್ದಾಗಿ ಪ್ರಸಾದ್ ಬಹಿರಂಗ ಮಾಡಿದರು. ಪ್ರಸಕ್ತ ಬಿಸಿಸಿಐ ಕಿರಿಯ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಪ್ರಸಾದ್, ಕೋಚಿಂಗ್ ಪಾತ್ರಕ್ಕೆ ಹಿಂತಿರುಗಲು ತೀವ್ರ ಆಸಕ್ತರಾಗಿದ್ದಾರೆ. ಅವರು ಹಿಂದೆ ಕೂಡ ಭಾರತದ ಬೌಲಿಂಗ್ ಕೋಚ್ ಆಗಿದ್ದರು.
ವಾಸ್ತವವಾಗಿ ಭಾರತ 2007ರ ಐಸಿಸಿ ವಿಶ್ವ ಟಿ 20ಯಲ್ಲಿ ಗೆಲುವು ಗಳಿಸಿದಾಗ ಪ್ರಸಾದ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಹೆಡ್ ಕೋಚ್ ಹುದ್ದೆಗೆ ಪ್ರಸಾದ್ ರವಿಶಾಸ್ತ್ರಿ, ಸಂದೀಪ್ ಪಾಟೀಲ್ ಮುಂತಾದವರಿಂದ ಕಠಿಣ ಸ್ಪರ್ಧೆ ಎದುರಿಸಿದ್ದಾರೆ. ಪ್ರಸಾದ್ ಅವರಿಗೆ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗದಿದ್ದರೆ ಬೌಲಿಂಗ್ ಕೋಚ್ ಆಗುವುದಕ್ಕೆ ಕೂಡ ಮುಕ್ತ ಮನಸ್ಸು ಹೊಂದಿದ್ದಾರೆಂದು ತಿಳಿದುಬಂದಿದೆ.