ಟೀಂ ಇಂಡಿಯಾ ವೇಗಿಗಳಿಗಾಗಿ ಇದೆಂಥಾ ತ್ಯಾಗ ಮಾಡಿದ್ರು ವಿರಾಟ್-ಅನುಷ್ಕಾ!
ತಮ್ಮ ತಂಡದ ವೇಗಿಗಳು ಅನುಕೂಲಕರವಾಗಿ ಪ್ರಯಾಣಿಸಲೆಂದು ಹೆಚ್ಚು ಅನುಕೂಲಕರ ಸೀಟ್ ಹೊಂದಿರುವ ಬ್ಯುಸಿನೆಸ್ ದರ್ಜೆಯ ಸೀಟ್ ಗಳನ್ನು ವಿರಾಟ್-ಅನುಷ್ಕಾ ಬಿಟ್ಟುಕೊಟ್ಟ ವಿಚಾರವನ್ನು ಇದೀಗ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಮೈಕಲ್ ವಾನ್ ಬಹಿರಂಗಪಡಿಸಿದ್ದಾರೆ. ‘ನೋಡಿ ಕೊಹ್ಲಿ ತಮ್ಮ ತಂಡದ ವೇಗಿಗಳಿಗಾಗಿ ಎಂಥಾ ಅನುಕೂಲ ಮಾಡಿಕೊಟ್ಟಿದ್ದಾರೆಂದು. ತಮ್ಮ ಬ್ಯುಸಿನೆಸ್ ಕ್ಲಾಸ್ ಸೀಟನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಆಸ್ಟ್ರೇಲಿಯನ್ನರೇ ಎಚ್ಚರಿಕೆ.. ಅವರ ನಾಯಕ ತಮ್ಮ ತಂಡದ ಆಟಗಾರರಿಗಾಗಿ ಎಂಥಾ ಕೆಲಸ ಮಾಡುತ್ತಿದ್ದಾರೆಂದು ನೋಡಿ’ ಎಂದು ವಾನ್ ಟ್ವೀಟ್ ಮಾಡಿದ್ದಾರೆ.