ಕೊನೆಗೂ ರೋಹಿತ್ ಶರ್ಮಾ, ತನ್ನ ಬಗ್ಗೆ ತಪ್ಪೊಪ್ಪಿಕೊಂಡ ವಿರಾಟ್ ಕೊಹ್ಲಿ

ಸೋಮವಾರ, 2 ಮಾರ್ಚ್ 2020 (09:18 IST)
ಕ್ರಿಸ್ಟ್ ಚರ್ಚ್: ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲ. ಹಾಗೆ ವಿರಾಟ್ ಕೊಹ್ಲಿಗೆ ಈಗ ಸೋತ ಬಳಿಕ ಬುದ್ಧಿ ಬಂದಿದೆ ಎನಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಬಳಿಕ ಟೆಸ್ಟ್ ಸರಣಿಯನ್ನೂ ಕ್ಲೀನ್ ಸ್ವೀಪ್ ಸೋಲು ಅನುಭವಿಸಿದ ಬಳಿಕ ತನ್ನ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.


ಕಳೆದ ಟೆಸ್ಟ್ ಸೋತ ಬಳಿಕ ರನ್ ಗಳಿಸದೇ ಇದ್ದರೂ ತಾನು ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ತಿಪ್ಪೆ ಸಾರಿದ್ದ ಕೊಹ್ಲಿ ಈಗ ಸರಣಿ ಸೋತ ಬಳಿಕ ಮಾತನಾಡಿದ್ದು, ತಾನು ರನ್ ಗಳಿಸದೇ ಇದ್ದಿದ್ದು ಮತ್ತು ರೋಹಿತ್ ಶರ್ಮಾ ತಂಡದಲ್ಲಿ ಇರದೇ ಇದ್ದಿದ್ದು ಸೋಲಿಗೆ ಕಾರಣವಾಯಿತು ಎಂದು ಒಪ್ಪಿಕೊಂಡಿದ್ದಾರೆ.

ವಿದೇಶಗಳಲ್ಲಿ ಗೆಲ್ಲಲು ಬ್ಯಾಟ್ ಮತ್ತು ಬೌಲಿಂಗ್ ನಲ್ಲಿ ಸಮತೋಲಿತ ಪ್ರದರ್ಶನ ಕಾಯ್ದುಕೊಳ್ಳಬೇಕು. ಆದರೆ ಬ್ಯಾಟ್ಸ್ ಮನ್ ಗಳು ಚೆನ್ನಾಗಿ ಆಡಲಿಲ್ಲ. ಬೌಲರ್ ಗಳ ಶ್ರಮಕ್ಕೆ ಬ್ಯಾಟ್ಸ್ ಮನ್ ಗಳಾದ ನಾವು ಸಾಥ್ ಕೊಡಲಿಲ್ಲ. ಟಿ20 ಯಲ್ಲಿ ಚೆನ್ನಾಗಿ ಆಡಿದ್ದೆವು. ಏಕದಿನದಲ್ಲಿ ಯುವ ಆಟಗಾರರು ಜವಾಬ್ಧಾರಿಯುತ ಆಟವಾಡಿದರು. ಆದರೆ ರೋಹಿತ್ ಶರ್ಮಾ ಅನುಪಸ್ಥಿತಿ ಹಾಗೂ ನಾನು ರನ್ ಗಳಿಸದೇ ಇದ್ದಿದ್ದು ತಂಡಕ್ಕೆ ಹೊಡೆತ ನೀಡಿತು’ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ