ನೀರಿಲ್ಲದೇ ಬಣಗುಡುತ್ತಿರುವ ಕೇಪ್ ಟೌನ್ ನಗರಕ್ಕೆ ವಿರಾಟ್ ಕೊಹ್ಲಿ ಮತ್ತು ಬಳಗ ನೆರವಾಗಿದ್ದು ಹೇಗೆ ಗೊತ್ತಾ?!

ಬುಧವಾರ, 28 ಫೆಬ್ರವರಿ 2018 (09:06 IST)
ಕೇಪ್ ಟೌನ್: ಇತ್ತೀಚೆಗೆ ದ.ಆಫ್ರಿಕಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾಗೆ ಅಲ್ಲಿನ ಕೇಪ್ ಟೌನ್ ನಗರದ ನೀರಿನ ಸಮಸ್ಯೆ ಚೆನ್ನಾಗಿ ಅರಿವಾಗಿದೆ. ಹೀಗಾಗಿ ಸಮಸ್ಯೆಗೆ ನೆರವಾಗಲು ಟೀಂ ಇಂಡಿಯಾ ಸದಸ್ಯರು ಕೈ ಜೋಡಿಸಿದ್ದಾರೆ.
 

ಕೇಪ್ ಟೌನ್ ನಲ್ಲಿ ಪಂದ್ಯವಿದ್ದಾಗ ಮಿತವಾಗಿ ನೀರು ಬಳಸಲು ಕ್ರಿಕೆಟಿಗರಿಗೂ ಸೂಚನೆ ನೀಡಲಾಗಿತ್ತು. ಅಲ್ಲಿನ ಜನ ನೀರಿಲ್ಲದೇ ಅಗತ್ಯ ಚಟುವಟಿಕೆಗಳಿಗೂ ಪರದಾಡುವಂತಾಗಿದೆ. ಹೀಗಾಗಿ ದ.ಆಫ್ರಿಕಾ ಕ್ರಿಕೆಟಿಗರ ಒಳ್ಳೆಯ ಕೆಲಸಕ್ಕೆ ಟೀಂ ಇಂಡಿಯಾ ಆಟಗಾರರೂ ಕೈ ಜೋಡಿಸಿದ್ದಾರೆ.

ಈ ನಿಟ್ಟಿನಲ್ಲಿ ನಾಯಕ ಕೊಹ್ಲಿ ಎಲ್ಲಾ ಆಟಗಾರರ ಪರವಾಗಿ 1 ಲಕ್ಷ ರೂ. ಗಳ ಚೆಕ್ ನ್ನು ಕೇಪ್ ಟೌನ್ ನಗರಾಡಳಿತಕ್ಕೆ ಹಸ್ತಾಂತರಿಸಿದೆ. ಈ ಹಣದಿಂದ ಅಗತ್ಯ ಕೊಳವೆ ಬಾವಿ ನಿರ್ಮಿಸಲಾಗುವುದು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆಫ್ರಿಕಾ ಮತ್ತು ಭಾರತದ ಆಟಗಾರರು ತಮ್ಮ ಸಹಿಯುಳ್ಳ ಜೆರ್ಸಿ ಕೊಡುಗೆ ನೀಡಿದ್ದು ಇದನ್ನು ಹರಾಜಿಗೆ ಹಾಕಿ ಬಂದ ಹಣದಿಂದ ನೀರಿನ ಸಮಸ್ಯೆ ನೀಗಿಸಲು ತಕ್ಕ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ