ಮತ್ತೊಂದು ದಾಖಲೆ ಮುರಿದು ದಿಗ್ಗಜರ ಸಾಲಿಗೆ ಸೇರಿದ ವಿರಾಟ್ ಕೊಹ್ಲಿ
ಮೊದಲ ಇನಿಂಗ್ಸ್ ನಲ್ಲಿ 49 ರನ್ ಗಳಿಸಿದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 18000 ರನ್ ಪೂರೈಸಿದ ಭಾರತೀಯ ಆಟಗಾರರ ಪೈಕಿ ನಾಲ್ಕನೆಯವರಾಗಿ ಸೇರ್ಪಡೆಯಾದರು.
ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದಾರೆ. ಆ ಪಟ್ಟಿಗೆ ಇದೀಗ ಕೊಹ್ಲಿ ಕೂಡಾ ಸೇರ್ಪಡೆಯಾದರು. ಸಚಿನ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.