ಟಿ20 ಶ್ರೇಯಾಂಕದಲ್ಲಿ ಏರಿಕೆ ಕಂಡ ವಿರಾಟ್ ಕೊಹ್ಲಿ

ಗುರುವಾರ, 24 ಡಿಸೆಂಬರ್ 2020 (09:00 IST)
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಮಾದರಿಯ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದು, ಏಳನೇ ಸ್ಥಾನಕ್ಕೇರಿದ್ದಾರೆ.


ಐಸಿಸಿ ಶ್ರೇಯಾಂಕದಲ್ಲಿ ಎಂಟನೇ ಸ್ಥಾನದಲ್ಲಿದ್ದ ಕೊಹ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ವಿರಾಟ್ 697 ಅಂಕ ಹೊಂದಿದ್ದಾರೆ. ಕೊಹ್ಲಿಯಲ್ಲದೆ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಟಾಪ್ 5 ರೊಳಗೆ ಸ್ಥಾನ ಹೊಂದಿದ್ದಾರೆ. 816 ಅಂಕ ಹೊಂದಿರುವ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಡೇವಿಡ್ ಮಲನ್ ನಂ.1 ಟಿ20 ಬ್ಯಾಟ್ಸ್ ಮನ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ