ಮೈದಾನದಲ್ಲಿ ವಿರಾಟ್ ಕೊಹ್ಲಿ ಹುಲಿ ವೇಷ

ಮಂಗಳವಾರ, 22 ಅಕ್ಟೋಬರ್ 2019 (09:05 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ವಿಚಿತ್ರ ಭಂಗಿಯೊಂದನ್ನು ಟ್ವಿಟರ್ ನಲ್ಲಿ ಬಿಸಿಸಿಐ ಪ್ರಕಟಿಸಿದ್ದು, ನಾನಾ ಕಾಮೆಂಟ್ ಗಳು ಬಂದಿವೆ.


ಕೊಹ್ಲಿ ಹುಲಿಯಂತೆ ಮುಖಭಾವ ಮಾಡಿಕೊಂಡ ಫೋಟೋವೊಂದನ್ನು ಪ್ರಕಟಿಸಿದ ಬಿಸಿಸಿಐ ಇದಕ್ಕೊಂದು ಅಡಿಬರಹ ಕೊಡಿ ಎಂದು ಕೇಳಿದೆ. ಬಿಸಿಸಿಐ ಹೀಗೊಂದು ಫೋಟೋ ಪ್ರಕಟಿಸಿದ್ದೇ ತಡ, ಅಭಿಮಾನಿಗಳು ತಮಗೆ ತೋಚಿದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಕೊಹ್ಲಿ ಮುಖಭಾವಕ್ಕೆ ತಕ್ಕಂತೆ ‘ಹುಲಿ ಬಂತು ಹುಲಿ, ಎಲ್ಲರೂ ಓಡಿ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೇ ನೆಪದಲ್ಲಿ ರವಿಶಾಸ್ತ್ರಿ ಕಾಲೆಳೆದಿದ್ದಾರೆ. ರವಿಶಾಸ್ತ್ರಿ ಮತ್ತೊಂದು ಬಾಟಲ್ ಬಿಯರ್ ಓಪನ್ ಮಾಡಿದಾಗ ಕೊಹ್ಲಿ ಮುಖಭಾವ ಹೀಗಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು, ಅಪ್ಪಿ ತಪ್ಪಿ ಕೊಹ್ಲಿ ಶಾಸ್ತ್ರಿ ಬಾಟಲಿ ಓಪನ್ ಮಾಡಿ ನೀರು ಎಂದು ಕುಡಿದಿದ್ದಾರೆ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ