ಕೌಂಟಿ ಕ್ರಿಕೆಟ್ ಆಡ್ತಾರಂತೆ ವಿರಾಟ್ ಕೊಹ್ಲಿ

ಗುರುವಾರ, 15 ಡಿಸೆಂಬರ್ 2016 (15:03 IST)
ಚೆನ್ನೈ: ಇಂಗ್ಲೆಂಡ್ ಪಿಚ್ ನಲ್ಲಿ ಪರದಾಡುತ್ತಾರೆ ಎಂಬ ಜೇಮ್ಸ್ ಆಂಡರ್ಸನ್ ಟೀಕೆಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಂಭೀರವಾಗಿ ಪರಿಗಣಿಸಿದಂತಿದೆ. ಅದಕ್ಕೇ ಮುಂದಿನ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಕೌಂಟಿ ಕ್ರಿಕೆಟ್ ಆಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡಗಳ ಪರವಾಗಿ ಹಲವಾರು ಭಾರತೀಯ ಕ್ರಿಕೆಟಿಗರು ಆಡಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲೇ ಸಾಕಷ್ಟು ಅವಕಾಶಗಳಿರುವ ಕಾರಣ ಯಾವ ಆಟಗಾರರೂ ಇಂಗ್ಲೆಂಡ್ ನ ಕ್ಲಬ್ ಕ್ರಿಕೆಟ್ ನಲ್ಲಿ ಆಡಲು ಆಸಕ್ತಿ ತೋರುತ್ತಿಲ್ಲ. ಆದರೆ ಇಂಗ್ಲೆಂಡ್ ನಲ್ಲೂ ರನ್ ಹೊಳೆ ಹರಿಸಬೇಕೆಂದು ಪಣ ತೊಟ್ಟಿರುವ ಕೊಹ್ಲಿ ಅದಕ್ಕಾಗಿ ಎಂತಹ ಪರಿಶ್ರಮ ಪಡಲೂ ಸಿದ್ಧರಾಗಿದ್ದಾರೆ.

ಎಲ್ಲಾ ಸರಿ ಹೋದರೆ, ತನ್ನ ವೇಳಾಪಟ್ಟಿಗೆ ಸರಿ ಹೊಂದಿದರೆ ಕೌಂಟಿ ಕ್ರಿಕೆಟ್ ನಲ್ಲಿ ಆಡಲು ಇಷ್ಟಪಡುವುದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ. ಐಪಿಎಲ್ ಮುಕ್ತಾಯದ ನಂತರ ಕೊಹ್ಲಿ ಈ ಯೋಜನೆ ಹಾಕಿಕೊಂಡಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದರು. ಆದರೆ 2018 ರ ಪ್ರವಾಸ ಅವರಿಗೆ ಪ್ರತಿಷ್ಠೆಯ ಕಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ