ವಿರಾಟ್ ಕೊಹ್ಲಿ ರೆಸ್ಟೋರೆಂಟ್ ಗೆ ದಕ್ಷಿಣ ಭಾರತೀಯರು ಹೀಗೆ ಬಂದ್ರೆ ಎಂಟ್ರಿ ಇಲ್ಲ!
ಶನಿವಾರ, 2 ಡಿಸೆಂಬರ್ 2023 (17:45 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮದೇ ಒನ್ 8 ಗ್ರೂಪ್ ಆಫ್ ರೆಸ್ಟೋರೆಂಟ್ ಹೊಂದಿದ್ದಾರೆ. ಆದರೆ ಕೊಹ್ಲಿ ಒಡೆತನದ ರೆಸ್ಟೋರೆಂಟ್ ಈಗ ವಿವಾದಕ್ಕೀಡಾಗಿದೆ.
ಮುಂಬೈನಲ್ಲಿ ಇತ್ತೀಚೆಗೆ ಕೊಹ್ಲಿ ಒನ್ 8 ಸಮೂಹದ ಒಂದು ರೆಸ್ಟೋರೆಂಟ್ ತೆರೆದಿದ್ದರು. ಆದರೆ ಈ ರೆಸ್ಟೋರೆಂಟ್ ಗೆ ದಕ್ಷಿಣ ಭಾರತದ ಶೈಲಿಯಲ್ಲಿ ಪಂಚೆ ಉಟ್ಟುಕೊಂಡು ಹೋದರೆ ಪ್ರವೇಶವಿಲ್ಲವಂತೆ!
ವ್ಯಕ್ತಿಯೊಬ್ಬ ಪಂಚೆ ಉಟ್ಟುಕೊಂಡು ಕೊಹ್ಲಿ ರೆಸ್ಟೋರೆಂಟ್ ನ ಮುಂಭಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಈ ತಾರತಮ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ತಾನು ತಮಿಳಿಗನಾಗಿದ್ದು ನಮ್ಮ ಸಾಂಪ್ರದಾಯಿಕ ಉಡುಗೆ ಪಂಚೆ ಉಟ್ಟುಕೊಂಡು ಹೋಗಿದ್ದೆನೆಂಬ ಕಾರಣಕ್ಕೆ ರೆಸ್ಟೋರೆಂಟ್ ಒಳಗೆ ಪ್ರವೇಶ ನಿರಾಕರಿಸಲಾಯಿತು ಎಂದು ಆತ ಆರೋಪ ಹೊರಿಸಿದ್ದಾನೆ. ಇದೀಗ ದಕ್ಷಿಣ ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಪಂಚೆ ಒಂದು ಸ್ಟೈಲ್ ಆಗಿದೆ. ಕಷ್ಟಪಟ್ಟು ಇಲ್ಲಿಗೆ ಬಂದಿದ್ದೆ. ಆದರೆ ಇಲ್ಲಿ ಜೀನ್ಸ್, ಟ್ರೌಸರ್ ಹಾಕಿಕೊಂಡು ಬಂದರೆ ಮಾತ್ರ ಪ್ರವೇಶ. ನನ್ನಂತೆ ತಮಿಳು ಡ್ರೆಸ್ ನಲ್ಲಿ ಬಂದರೆ ಪ್ರವೇಶವಿಲ್ಲ ಎಂದು ಆ ವ್ಯಕ್ತಿ ರೆಸ್ಟೋರೆಂಟ್ ಮುಂದೆಯೇ ನಿಂತು ಆರೋಪಿಸಿದ್ದಾರೆ.