ರೋಹಿತ್ ಶರ್ಮಾ ಹೊರಗಿಟ್ಟು ಟೀಕೆಗೊಳಗಾದ ವಿರಾಟ್ ಕೊಹ್ಲಿ
ನಾವು ರೋಹಿತ್ ಬ್ಯಾಟಿಂಗ್ ನೋಡಲೆಂದೇ ಬಂದಿದ್ದೆವು. ಆದರೆ ಅವರಿಲ್ಲ ಎಂದ ತಕ್ಷಣ ನಮಗೆ ಮುಂದೆ ಪಂದ್ಯ ನೋಡಲು ಮನಸ್ಸಾಗಲಿಲ್ಲ. ಅಷ್ಟಕ್ಕೂ ಕೊಹ್ಲಿಯದ್ದು ಇದೆಂಥಾ ಅಸಂಬದ್ಧ ಲೆಕ್ಕಾಚಾರ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪರ್ಯಾಸವೆಂದರೆ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸಂಪೂರ್ಣ ನೆಲಕಚ್ಚಿತ್ತು. ಅದರಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ನೆಟ್ಟಿಗರು ಕೊಹ್ಲಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.