ಪಂದ್ಯ ನಿಲ್ಲಿಸಿದ್ದಕ್ಕೆ ಮ್ಯಾಚ್ ರೆಫರಿ ಜತೆ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿ

ಮಂಗಳವಾರ, 16 ಜನವರಿ 2018 (08:37 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಮಂದ ಬೆಳಕಿನ ಕಾರಣಕ್ಕೆ ಬೇಗನೇ ದಿನದಾಟ ನಿಲ್ಲಿಸಿದ್ದಕ್ಕೆ ಮ್ಯಾಚ್ ರೆಫರಿ ಮೇಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದಾರೆ.
 

ದ.ಆಫ್ರಿಕಾ ದ್ವಿತೀಯ ಇನಿಂಗ್ಸ್ ಆಡುತ್ತಿದ್ದಾಗ ಮಳೆ ಬಂದು ಕೆಲ ಕಾಲ ಪಂದ್ಯ ಸ್ಥಗಿತಗೊಳಿಸಬೇಕಾಗಿ ಬಂತು. ಮತ್ತೆ ಪಂದ್ಯ ಆರಂಭವಾಗಿ 5 ಓವರ್ ಮುಗಿದಾಗ ಅಂಪಾಯರ್ ಗಳು ಮಂದ ಬೆಳಕಿನ ಕಾರಣ ನೀಡಿ ದಿನದಾಟ ನಿಲ್ಲಿಸಿದರು.

ಇದರಿಂದ ಅಸಮಾಧಾನಗೊಂಡ ವಿರಾಟ್ ಕೊಹ್ಲಿ ನೇರವಾಗಿ ಕೋಚ್ ರವಿಶಾಸ್ತ್ರಿ ಜತೆ ಮ್ಯಾಚ್ ರೆಫರಿ ಕೋಣೆಗೆ ತೆರಳಿ ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ರವಿಶಾಸ್ತ್ರಿ ಮೂಕ ಪ್ರೇಕ್ಷಕರಾಗಿದ್ದರು. ಭಾರತಕ್ಕೆ ಸರಣಿ ಉಳಿಸಿಕೊಳ್ಳಲು ಈ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಆಟ ಸರಿಯಾಗಿ ಆಗದೇ ಇದ್ದಾಗ ಕೊಹ್ಲಿ ಅಸಮಾಧಾನಗೊಂಡರು. ಆಫ್ರಿಕಾ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು. ಭಾರತ ಮೊದಲ ಇನಿಂಗ್ಸ್ ನಲ್ಲಿ 307 ರನ್ ಗಳಿಗೆ ಆಲೌಟ್ ಆಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ