ಮತ್ತೆ ವಿಮಾನದಲ್ಲಿ ಅಭಿಮಾನಿಗೆ ಚಮಕ್ ಕೊಟ್ಟ ಅನಿಲ್ ಕುಂಬ್ಳೆ

ಶನಿವಾರ, 22 ಡಿಸೆಂಬರ್ 2018 (09:29 IST)
ಮುಂಬೈ: ಇತ್ತೀಚೆಗಷ್ಟೇ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಭಿಮಾನಿಯೊಬ್ಬರ ಕೋರಿಕೆ ಮೇರೆಗೆ ಹಸ್ತಾಕ್ಷರ ನೀಡಿ ಖುಷಿಪಡಿಸಿದ ಘಟನೆ ಓದಿರುತ್ತೀರಿ.


ಇದೀಗ ಕುಂಬ್ಳೆ ಮತ್ತೆ ಅಭಿಮಾನಿಯೊಬ್ಬರಿಗೆ ಅಂತಹದ್ದೇ ಜಾದೂ ಮಾಡಿದ್ದಾರೆ. ತನ್ವಿ ದುಬೇ ಎಂಬ ಅಭಿಮಾನಿ ಮಹಿಳೆ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ಅನಿಲ್ ಕುಂಬ್ಳೆಯನ್ನು ನೋಡಿ ಖಷಿಯಾಗಿ ‘ಓ ಮೈ ಗಾಡ್.. ಅನಿಲ್ ಕುಂಬ್ಳೆಯನ್ನುನ ನೋಡಿದೆ. ನಾವು ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇವೆ. ನನಗೆ ಒಂದು ಸೆಲ್ಫೀ ತೆಗೆದುಕೊಳ್ಳಲು ಅವಕಾಶ ಸಿಗುತ್ತಾ?’ ಎಂದು ಕುಂಬ್ಳೆಗೇ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ತನ್ವೀ ಅಚ್ಚರಿಯಾಗುವಂತೆ ತಕ್ಷಣವೇ ಉತ್ತರಿಸಿದ ಕುಂಬ್ಳೆ ‘ಖಂಡಿತಾ, ಫ್ಲೈಟ್ ಟೇಕ್ ಆಫ್ ಆದ ಮೇಲೆ’ ಎಂದಿದ್ದಾರೆ. ಹೇಳಿದ್ದು ಮಾತ್ರವಲ್ಲ, ಹೇಳಿದಂತೆ ನಡೆದುಕೊಂಡಿದ್ದಾರೆ. ಬಳಿಕ ತನ್ವೀ ಕುಂಬ್ಳೆ ಜತೆಗೆ ತೆಗೆಸಿಕೊಂಡ ಫೋಟೋವನ್ನು ತನ್ನ ಟ್ವಿಟರ್ ನಲ್ಲಿ ಪ್ರಕಟಿಸಿ ‘ಕೊನೆಗೂ ನನ್ನ ಕನಸು ಈಡೇರಿತು. ಅನಿಲ್ ಕುಂಬ್ಳೆ ನೀವು ನಮಗೆಲ್ಲಾ ಸ್ಪೂರ್ತಿ’ ಎಂದು ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ