ರನ್ ಓಡುವಾಗ ಕೋಪತಾಪ ಪ್ರದರ್ಶಿಸಿದ ಕ್ಯಾಪ್ಟನ್ ಕೂಲ್ ಧೋನಿ

ಶುಕ್ರವಾರ, 20 ಮೇ 2016 (15:13 IST)
ಭಾರತದ ಸೀಮಿತ ಓವರುಗಳ ನಾಯಕ ಎಂ.ಎಸ್. ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಶಾಂತಚಿತ್ತತೆ ಹೊಂದಿರುವುದಕ್ಕೆ ಹೆಸರಾಗಿದ್ದಾರೆ. ಎಂತಹದ್ದೇ ಪರಿಸ್ಥಿತಿಯಿರಲಿ ಕ್ರಿಕೆಟ್ ಮೈದಾನದಲ್ಲಿ ಯಾವುದೇ ರೀತಿಯ ಕೋಪ ಅಥವಾ ಅಸಹನೆಯನ್ನು ತಮ್ಮ ವೃತ್ತಿಜೀವನದಲ್ಲಿ ಧೋನಿ ತೋರಿಸಿರಲಿಲ್ಲ.

ಆದಾಗ್ಯೂ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ರೈಸಿಂಗ್ ಪುಣೆ ನಾಯಕ ಧೋನಿ ಅಸಹನೆಯಿಂದ ವರ್ತಿಸಿದ್ದಾರೆಂದು ಹೇಳಲಾಗುತ್ತಿದೆ.  ಆರ್‌ಪಿಎಸ್ ಇನ್ನಿಂಗ್ಸ್ 14ನೇ ಓವರಿನಲ್ಲಿ ಧೋನಿ ಮತ್ತು ಆಲ್‌ರೌಂಡರ್ ಇರ್ಫಾನ್ ಪಠಾಣ್ ರನ್ ಕದಿಯುವ ಯತ್ನದಲ್ಲಿ ಇರ್ಫಾನ್ ತಮ್ಮ ವಿಕೆಟ್ ತ್ಯಾಗ ಮಾಡಬೇಕಾಯಿತು.
 
ಧೋನಿ ಸುನಿಲ್ ನಾರಾಯಣ್ ಚೆಂಡನ್ನು ನೇರವಾಗಿ ಪಿಯುಶ್ ಚಾವ್ಲಾ ಕೈಗೆ ಹೊಡೆದು ಸಿಂಗಲ್ ರನ್‌ಗೆ ಓಡಿದರು. ಪಠಾಣ್ ಅವರಿಗೆ ರನ್ ಓಡುವುದಕ್ಕೆ ಆಸಕ್ತಿ ಇರಲಿಲ್ಲ. ಆದರೆ ಮೈದಾನದ ಮಧ್ಯದಲ್ಲಿ ಧೋನಿ ತಮ್ಮ ಹತಾಶೆ ಮತ್ತು ಕೋಪ ವ್ಯಕ್ತಪಡಿಸಿದ್ದರಿಂದ ಪಠಾಣ್ ಬಲವಂತವಾಗಿ ರನ್ ಓಡಿದರು.

ಧೋನಿ ಮೈದಾನದಲ್ಲಿ ಅಷ್ಟೊಂದು ಅಸಹನೆಯಿಂದ ವರ್ತಿಸಿದ್ದನ್ನು ತಾವು ನೋಡೇ ಇಲ್ಲ ಎಂದು ವೀಕ್ಷಕ ವಿವರಣೆಕಾರರು ಕೂಡ ತಿಳಿಸಿದ್ದಾರೆ. ವರದಿಯೊಂದರ ಪ್ರಕಾರ ಈ ವಿಡಿಯೊವನ್ನು ಪಂದ್ಯದ ಬಳಿಕ ಯೂಟ್ಯೂಬ್ ಮತ್ತು ಐಪಿಎಲ್ ವೆಬ್‌ಸೈಟ್‌ನಿಂದ ತೆಗೆಯಲಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ