ಗ್ಯಾಲರಿಯಲ್ಲಿ ವಿರುಷ್ಕಾ ವಿವಾಹ ಪೋಸ್ಟರ್ ಹಿಡಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು ಗೊತ್ತಾ

ಸೋಮವಾರ, 5 ಫೆಬ್ರವರಿ 2018 (08:00 IST)
ಸೆಂಚುರಿಯನ್: ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾಶರ್ಮಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಸಿಗುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಕೊಹ್ಲಿ ಪಾಲಿಗೆ ಅನುಷ್ಕಾ ಖುಷಿಯ ಬುಗ್ಗೆಯಾಗಿದ್ದಾರೆ. ಅಂತಹದ್ದೆ ಒಂದು ಸನ್ನಿವೇಶ ಇದಾಗಿದೆ.


ಇದೀಗ ಸೆಂಚುರಿಯನ್‌ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಳೆಯಲ್ಲಿ ಭಾರತೀಯ ಅಭಿಮಾನಿಯೊಬ್ಬ ವಿರುಷ್ಕಾ ಅವರ ದೊಡ್ಡ ಪೋಸ್ಟರ್ ಹಿಡಿದು ವಿವಾಹದ ಬಗ್ಗೆ ಅಭಿನಂದನಾ ಸಂದೇಶವನ್ನು ಸಾರಿದ್ದರು.


ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಇದನ್ನು ಕಂಡ ಕೂಡಲೇ ಅಭಿಮಾನಿಯತ್ತ ಕೈಬೀಸಿದರು. ಈ ಎಲ್ಲ ಕ್ಷಣಗಳು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದವು. ಒಟ್ಟಾರೆ ವಿರಾಟ್ ಗೆ ಪತ್ನಿ ಅನುಷ್ಕಾ ಅಂದರೆ ಎಷ್ಟು ಪ್ರೀತಿಯೆಂಬುದು ಅಭಿಮಾನಿಗಳಿಗೂ ಗೊತ್ತಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ