ಧೋನಿ ಮಾತು ಕೇಳದೆ ರೋಹಿತ್ ಶರ್ಮಾಗೆ ಕಿವಿಗೊಟ್ಟು ತಪ್ಪು ಮಾಡಿದ ವಿರಾಟ್ ಕೊಹ್ಲಿ!
ದ.ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದಾಗ 36 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಜಸ್ಪ್ರೀತ್ ಬುಮ್ರಾ ಎಸೆದ ಎಸೆತವನ್ನು ಅಂಪಾಯರ್ ವೈಡ್ ಎಂದು ತೀರ್ಪಿತ್ತರು. ಆದರೆ ರೋಹಿತ್ ಶರ್ಮಾ ಗ್ಲೌಸ್ ಗೆ ಬಾಲ್ ತಾಗಿದ್ದಾಗಿ ಹೇಳಿ ಕೊಹ್ಲಿಗೆ ಡಿಆರ್ ಎಸ್ ತೆಗೆದುಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಧೋನಿ ಮತ್ತು ಬೌಲರ್ ಬುಮ್ರಾ ಮಾತನ್ನು ಕೊಹ್ಲಿ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.
ರಿಪ್ಲೇ ನೋಡಿದಾಗ ಗ್ಲೌಸ್ ಗೆ ಬಾಲ್ ತಾಗಿರಲೇ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಅಲ್ಲಿಗೆ ಭಾರತದ ಪಾಲಿಗಿದ್ದ ಏಕೈ ರಿವ್ಯೂ ಕೂಡಾ ತಪ್ಪಿ ಹೋಯ್ತು. ಧೋನಿ ಸಲಹೆ ಕೇಳದೇ ಕೊಹ್ಲಿ ತಪ್ಪು ಮಾಡಿದರು!