ಧೋನಿ ನಂತರ ಭಾರತ ತಂಡದ ವಿಕೆಟ್ ಕೀಪರ್ ಯಾರು?

ಮಂಗಳವಾರ, 9 ಮೇ 2017 (10:00 IST)
ಮುಂಬೈ: ಧೋನಿಗೆ 35 ವರ್ಷ. ನಾಯಕ ಸ್ಥಾನದಿಂದ ನಿವೃತ್ತಿ ಪಡೆದಿದ್ದಾರೆ. ಇನ್ನು ಅವರ ಕ್ರಿಕೆಟ್ ವೃತ್ತಿ ಬದುಕು ಎಷ್ಟು ದಿನ ಮುಂದುವರಿಯುತ್ತದೆ ಎಂದು ಗೊತ್ತಿಲ್ಲ. ಹಾಗಿರುವಾಗ ಭಾರತ ತಂಡದ ಭವಿಷ್ಯದ ಕೀಪರ್ ಯಾರು?

 
ಈ ಪ್ರಶ್ನೆಗೆ ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಉತ್ತರಿಸಿದ್ದಾರೆ. ‘ರಿಷಬ್ ಪಂತ್ ಪ್ರತಿಭಾವಂತ ಕೀಪರ್ ಕಮ್ ಬ್ಯಾಟ್ಸ್ ಮನ್. ಅವರು ಧೋನಿ ಸ್ಥಾನವನ್ನು ತುಂಬಬಲ್ಲರು. ಅವರು ಈಗ ಆಡುತ್ತಿರುವ ರೀತಿ ಗಮನಸಿದರೆ ಭವಿಷ್ಯದ ವಿಕೆಟ್ ಕೀಪರ್ ಆಗಬಲ್ಲರು. ನಮಗೆ ಬೇಕಾಗಿರುವುದೂ ಅಂತಹದ್ದೇ ಆಟಗಾರ’ ಎಂದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ರಿಷಬ್ ಸ್ಥಾನ ಪಡೆದಿಲ್ಲ. ಆದರೆ ಧೋನಿ ನಂತರ ಅವರೇ ಭವಿಷ್ಯದ ಕೀಪರ್ ಎಂದಿದ್ದಾರೆ ಪ್ರಸಾದ್. ಅಂತಿಪ್ಪ ಭವಿಷ್ಯದ ಸ್ಟಾರ್ ನನ್ನು ಈ ಸರಣಿಗೆ ಆಯ್ಕೆ ಮಾಡಿಲ್ಲವೆಂದು ಚಿಂತೆ ಮಾಡಬೇಕಾಗಿಲ್ಲ.

ರಿಷಬ್ ಒಬ್ಬ ಉತ್ತಮ ವಿಕೆಟ್ ಕೀಪರ್ ಆಗಿ ಬೆಳೆಯಲು ಬೇಕಾದ ಎಲ್ಲಾ ಪ್ರೋತ್ಸಾಹ, ಸೌಲಭ್ಯವನ್ನು ನೀಡುವುದಾಗಿ ಯುವ ಆಟಗಾರನಿಗೆ ಪ್ರಸಾದ್ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ