ವಿರಾಟ್ ಕೊಹ್ಲಿ ಮಾಡಿದ ಈ ಟ್ವೀಟ್ ಯಾರ ಬಗ್ಗೆ?

ಬುಧವಾರ, 8 ಫೆಬ್ರವರಿ 2017 (09:59 IST)
ಮುಂಬೈ: ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಸದಾ ಸಕ್ರಿಯ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಕೊಹ್ಲಿ ನಿನ್ನೆ ಮಾಡಿದ್ದ ಈ ಟ್ವೀಟ್ ಯಾರ ಬಗ್ಗೆ ಎನ್ನುವ ಚರ್ಚೆ ಶುರುವಾಗಿದೆ.
 

ಟ್ವಿಟರ್ ನಲ್ಲಿ ಕೊಹ್ಲಿ “ನೀವು ಜಗತ್ತಿಗೆ ಹೇಳಲು ಏನೋ ಇರುತ್ತದೆ. ಆದರೆ ಇದುವರೆಗೆ ಆಗಿರುವುದೇ ಇಲ್ಲ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಇದು ತಮ್ಮ ಮತ್ತು ಅನುಷ್ಕಾ ಶರ್ಮಾ ಜತೆಗಿನ ಸಂಬಂಧದ ಬಗ್ಗೆ ಕೊಹ್ಲಿ ಹೇಳಿದ್ದಾಗಿರಬಹುದು ಎಂಬ ಗುಸು ಗುಸು ಹರಡಿದೆ.

ಇವರಿಬ್ಬರೂ ಅಮರ ಪ್ರೇಮಿಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ಅಧಿಕೃತವಾಗಿ ಇವರಿಬ್ಬರೂ ಇದನ್ನು ಎಲ್ಲೂ ಹೇಳಿಕೊಂಡಿಲ್ಲ. ಹಾಗಾಗಿ ಕೊಹ್ಲಿ ಇದನ್ನು ಉದ್ದೇಶಿಸಿಕೊಂಡೇ ಏನೋ ಹೇಳಲು ಬಯಸಿದರೂ, ಹೇಳಲಾಗಿಲ್ಲ ಎಂದಿರಬೇಕು ಎನ್ನುತ್ತಿದ್ದಾರೆ ಗಾಸಿಪ್ ಪ್ರಿಯರು.  ಆದರೆ ಹೇಳಲು ಆಗದೇ ಇರುವುದಕ್ಕೆ ಕಾರಣವೇನು ಎಂಬುದು ಮಾತ್ರ ಗೊತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ