ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರುವುದಕ್ಕೆ ಕಾರಣ ಇದೇ!

ಭಾನುವಾರ, 29 ನವೆಂಬರ್ 2020 (08:25 IST)
ಸಿಡ್ನಿ: ಹಾರ್ದಿಕ್ ಪಾಂಡ್ಯ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡಿರಲಿಲ್ಲ. ಒಂದು ವೇಳೆ ಅವರು ಬೌಲಿಂಗ್ ಕೂಡಾ ಮಾಡುತ್ತಿದ್ದರೆ ಭಾರತಕ್ಕೆ ಗೆಲುವು ಸಾಧ್ಯವಾಗುತ್ತಿತ್ತೇನೋ ಎಂಬ ಮಾತು ಕೇಳಿಬಂದಿತ್ತು.


ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಾಂಡ್ಯ ನನ್ನ ಆರೋಗ್ಯ ಸರಿಯಾದ ಮೇಲೆ ಬೌಲಿಂಗ್ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಸದ್ಯಕ್ಕೆ ಪಾಂಡ್ಯ ಕೇವಲ ಬ್ಯಾಟ್ಸ್ ಮನ್ ಆಗಿ ತಂಡಕ್ಕೆ ಉಪಯೋಗಕ್ಕೆ ಬರುತ್ತಿದ್ದಾರೆ. ಅಷ್ಟಕ್ಕೂ ಪಾಂಡ್ಯ ಬೌಲಿಂಗ್ ಮಾಡದೇ ಇರುವುದಕ್ಕೆ ಕಾರಣ ಅವರ ಬೆನ್ನು ನೋವು. ಬೆನ್ನಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪಾಂಡ್ಯ ಸದ್ಯಕ್ಕೆ ಬೌಲಿಂಗ್ ಮಾಡುವುದು ಸೂಕ್ತವಲ್ಲ ಎಂಬ ಸಲಹೆ ಮೇರೆಗೆ ಅವರು ಬೌಲಿಂಗ್ ಮಾಡುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ