ಸಚಿನ್ ತೆಂಡುಲ್ಕರ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದು ಯಾಕೆ?

ಸೋಮವಾರ, 30 ಜನವರಿ 2017 (09:01 IST)
ನವದೆಹಲಿ: ನರೇಂದ್ರ ಮೋದಿ ಭಾರತದ ಪ್ರಧಾನಿ. ಸಚಿನ್ ತೆಂಡುಲ್ಕರ್ ಕ್ರಿಕೆಟಿಗರಾದರೂ, ಸಂಸದರು. ಜತೆಗೆ ಮೋದಿಯವರ ಕನಸಿನ ಕೂಸು ಆದರ್ಶ ಗ್ರಾಮ ಯೋಜನೆಯನ್ನು ಮಾಡಿ ತೋರಿಸಿದವರು. ಇದೀಗ ತೆಂಡುಲ್ಕರ್ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಕಾರಣ ಬೇರೆಯೇ ಇದೆ.

 
ಪ್ರತೀ ತಿಂಗಳು ಮೋದಿ ಆಕಾಶವಾಣಿಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅದರಲ್ಲಿ ಮಾಡುವ ಭಾಷಣದಲ್ಲಿ ಮೋದಿ ಉತ್ತಮ ಕೆಲಸ ಮಾಡಿದ ಯಾವುದೇ ಕ್ಷೇತ್ರದವರನ್ನು ಉಲ್ಲೇಖಿಸುತ್ತಾರೆ. ಅದೇ ರೀತಿ ಈ ತಿಂಗಳ ಭಾಷಣದಲ್ಲಿ ಮೋದಿ ಸಚಿನ್ ತೆಂಡುಲ್ಕರ್ ಅವರ ಉದಾಹರಣೆ ಕೊಟ್ಟಿದ್ದಾರೆ.

ಮುಂಬರುವ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಮೋದಿ ಸಚಿನ್ ತೆಂಡುಲ್ಕರ್ ಅವರಂತೆ ಗಮನವಿಟ್ಟು ಅಭ್ಯಾಸ ಮಾಡಿ. ಸಚಿನ್ ರಂತೆ ನಿಮಗೇ ಸವಾಲು ಹಾಕಿಕೊಂಡು ಗೆಲ್ಲಿ ಎಂದು ಸಲಹೆ ನೀಡಿದ್ದರು. ಇದಕ್ಕೆ ಸಚಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

‘ನನ್ನನ್ನು ಉಲ್ಲೇಖಿಸಿದ್ದಕ್ಕೆ ಧನ್ಯವಾದಗಳು ಮೋದಿ ಜೀ. ಯಾರೇ ಆದರೂ ಸರಿಯಾದ ತಯಾರಿ ನಡೆಸುವುದು ಮುಖ್ಯ. ವಿದ್ಯಾರ್ಥಿಗಳೇ ಆಗಲಿ, ಆಟಗಾರರೇ ಆಗಲಿ ಏಕಾಗ್ರತೆ ಇದ್ದರೆ ಸವಾಲುಗಳನ್ನು ಎದುರಿಸಲು ಸುಲಭವಾಗುತ್ತದೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ