ಧೋನಿ 9 ವರ್ಷಗಳ ಕಾಲ ನಾಯಕರಾಗಿದ್ದಾರೆ. ಇನ್ನೂ 4 ವರ್ಷಗಳ ಕಾಲ ನಾಯಕತ್ವ ವಹಿಸುವ ಸಾಮರ್ಥ್ಯ ಅವರಿಗಿದೆಯೇ,ಈಗಾಗಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಈಗ ಏಕದಿನ ಮತ್ತು ಟಿ 20 ಮಾತ್ರ ಆಡುತ್ತಾರೆ ಎಂದು ಗಂಗೂಲಿ ಹೇಳಿದರು.
ವಿರಾಟ್ ಕೊಹ್ಲಿ ದಿನದಿನಕ್ಕೂ ಸುಧಾರಿಸುತ್ತಿದ್ದಾರೆ. ಸ್ಥಿರತೆಗೆ ಸಂಬಂಧಿಸಿದಂತೆ ಅವರು ಜಗತ್ತಿನಲ್ಲೇ ಅತ್ಯುತ್ತಮ. ಅವರ ಮಾನಸಿಕ ಶಕ್ತಿ, ಮೈದಾನದಲ್ಲಿ ನಡವಳಿಕೆ ಅದ್ಭುತವಾಗಿದೆ. ಆದ್ದರಿಂದ ಧೋನಿ 2019ರಲ್ಲಿ ಭಾರತವನ್ನು ಧೋನಿ ಮುನ್ನಡೆಸುವರೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಈ ಉತ್ತರ ಇಲ್ಲವೆಂದಾದರೆ, ಹೊಸ ನಾಯಕನನ್ನು ಹುಡುಕಿ ಎಂದು ಗಂಗೂಲಿ ಹೇಳಿದರು.