ಭಾರತ-ಪಾಕಿಸ್ತಾನ ಪಂದ್ಯಕ್ಕೆ ಸಾನಿಯಾ ಮಿರ್ಜಾ ಬರ್ತಾರಾ?

ಸೋಮವಾರ, 29 ಮೇ 2017 (10:45 IST)
ಲಂಡನ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗಲಿವೆ. ಈ ಪಂದ್ಯಕ್ಕೆ ಭಾರತದ ಟೆನಿಸ್ ತಾರೆ ಬೆಂಬಲ, ಪತಿ ಶೊಯೇಬ್ ಮಲಿಕ್ ರ ಪಾಕ್ ತಂಡಕ್ಕೋ, ಭಾರತ ತಂಡಕ್ಕೋ ಎಂಬ ಪ್ರಶ್ನೆ ಪ್ರತೀ ಬಾರಿ ಬರುತ್ತವೆ.

 
ಅದೆಲ್ಲದಕ್ಕಿಂತ ಮುಖ್ಯವಾಗಿ ಶೊಯೇಬ್ ಹಲವು ದಿನಗಳ ನಂತರ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಕ್ ಪರ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾನಿಯಾ ಪತಿಯ ಜತೆಗಿರುತ್ತಾರಾ? ಅಥವಾ ತವರಿನ ತಂಡಕ್ಕೆ ಚಿಯರ್ ಅಪ್ ಮಾಡುತ್ತಾರಾ?

ಯಾವ ರಗಳೆಯೂ ಬೇಡವೆಂದು ಸಾನಿಯಾ ಪಂದ್ಯವನ್ನು ನೋಡಲು ಖುದ್ದಾಗಿ ಮೈದಾನಕ್ಕೆ ಬರುವುದೇ ಇಲ್ಲವಂತೆ. ಫ್ರೆಂಚ್ ಓಪನ್ ಟೂರ್ನಿಗೆ ತಯಾರಿ ನಡೆಸುತ್ತಿರುವುದರಿಂದ ಸಾನಿಯಾ ಜೂನ್ 4 ರಂದು ನಡೆಯಲಿರುವ ಪಂದ್ಯಕ್ಕೆ ಆಗಮಿಸಲ್ಲ ಎಂದು ಪತಿ ಶೊಯೇಬ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆಯಿಂದ ಫ್ರೆಂಚ್ ಓಪನ್ ಟೂರ್ನಿ ಆರಂಭವಾಗಿತ್ತು. ಹೀಗಾಗಿ ಸಾನಿಯಾಗೂ ಒಂದು ನೆಪ ಸಿಕ್ಕಿತು. ನಮ್ಮ ದೇಶವನ್ನು ಬೆಂಬಲಿಸಲಿಲ್ಲ ಎಂದು ಆಕ್ಷೇಪಿಸುವವರ ಕೈಯಿಂದ ತಪ್ಪಿಸಿಕೊಂಡ ಹಾಗಾಯ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ