ನೋ ಬಾಲ್ ಎಸೆದು ಎದುರಾಳಿಗೆ ಶತಕ ತಪ್ಪಿಸಿದ ವಿಂಡೀಸ್ ಕ್ರಿಕೆಟಿಗ!
ಮಂಗಳವಾರ, 5 ಸೆಪ್ಟಂಬರ್ 2017 (08:54 IST)
ಬಾರ್ಬಡೋಸ್: ಹಿಂದೊಮ್ಮೆ ಶ್ರೀಲಂಕಾ ಕ್ರಿಕೆಟಿಗ ಸೂರಜ್ ರಣ್ ದೀವ್ ಸೆಹ್ವಾಗ್ ಕೊನೆಯ ಬಾಲ್ ನಲ್ಲಿ ಶತಕದ ಅಂಚಿನಲ್ಲಿದ್ದಾಗ ಬೇಕೆಂದೇ ನೋ ಬಾಲ್ ಎಸೆದು ಶತಕ ತಪ್ಪಿಸಿದ್ದು ಕೆಲವರಿಗೆ ನೆನಪಿರಹುದು. ಅಂತಹದ್ದೇ ಘಟನೆ ಇದೀಗ ಮತ್ತೆ ನಡೆದಿದೆ.
ಇದು ನಡೆದಿರುವುದು ವಿಂಡೀಸ್ ನ ಕೆರೆಬಿಯನ್ ಕ್ರಿಕೆಟ್ ಲೀಗ್ ನಲ್ಲಿ. ಕಿರನ್ ಪೊಲ್ಲಾರ್ಡ್ ಈ ರೀತಿ ಮೋಸದಾಟ ಆಡಿದವರು. ಎದುರಾಳಿ ತಂಡದ ಎವಿನ್ ಲೆವಿಸ್ ಕೊನೆಯ ಒಂದು ಎಸೆತ ಬಾಕಿ ಇರುವಾಗ 99 ರನ್ ಗಳಿಸಿ ಶತಕಕ್ಕಾಗಿ ಕಾಯುತ್ತಿದ್ದರು.
ಆದರೆ ಪೊಲಾರ್ಡ್ ಆ ಬಾಲ್ ನ್ನು ಉದ್ದೇಶಪೂರ್ವಕವಾಗಿ ನೋ ಬಾಲ್ ಎಸೆದು ಶತಕ ತಪ್ಪಿಸಿದ್ದಾರೆ. ಇದರಿಂದ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ದಾಖಲಿಸುವ ಲೆವಿಸ್ ಕನಸು ಭಗ್ನವಾಯಿತು. ಆಗ ಲೆವಿಸ್ 32 ಬಾಲ್ ಗಳಲ್ಲಿ 97 ರನ್ ಗಳಿಸಿದ್ದರು. ಕ್ರೀಸ್ ನ ಇನ್ನೊಂದು ತುದಿಯಲ್ಲಿ ಲೆವಿಸ್ ತಂಡದ ನಾಯಕ ಕ್ರಿಸ್ ಗೇಲ್ ಇದ್ದರು.
ಆದರೆ ಪೊಲಾರ್ಡ್ ಮಾಡಿದ ಕೃತ್ಯಕ್ಕೆ ಇದೀಗ ಭಾರೀ ಟೀಕೆ ವ್ಯಕ್ತವಾಗಿದೆ. ಟ್ವಿಟರ್ ನಲ್ಲಿ ಅಭಿಮಾನಿಗಳು ಪೊಲಾರ್ಡ್ ನನ್ನು ಮೋಸಗಾರ ಎಂದು ಕರೆದಿರುವುದಲ್ಲದೆ, ನಿಮ್ಮ ಕೃತ್ಯಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ