ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ಕಾರು ಅಪಘಾತ ವಿಡಿಯೋ ವೈರಲ್
ಶನಿವಾರ, 30 ಜನವರಿ 2021 (10:13 IST)
ಪೋರ್ಟ್ ಆಫ್ ಸ್ಪೇನ್: ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ಕಾರು ಭೀಕರ ಅಪಘಾತವಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲ್ಲಾರ್ಡ್ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಇವೆಲ್ಲವೂ ಸುಳ್ಳು ಸುದ್ದಿ ಎಂದು ದೃಢಪಟ್ಟಿದೆ. ಇತ್ತ ಪೊಲ್ಲಾರ್ಡ್ ಯುಎಇನಲ್ಲಿ ಟಿ10 ಲೀಗ್ ಕ್ರಿಕೆಟ್ ಗೆ ತಯಾರಿ ನಡೆಸುತ್ತಿದ್ದಾರೆ.