ಚೆನ್ನೈನಲ್ಲಿ ಮಹಿಳಾ ಕ್ರಿಕೆಟ್‌ ಟೆಸ್ಟ್: ಮತ್ತೊಂದು ಶತಕ ಸಿಡಿಸಿದ ಸ್ಮೃತಿ ಮಂದಾನ

Sampriya

ಶುಕ್ರವಾರ, 28 ಜೂನ್ 2024 (13:54 IST)
Photo Courtesy X
ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಸತತ ಎರಡು ಶತಕ ದಾಖಲಿಸಿ ಮಿಂಚು ಹರಿಸಿದ್ದ ಭಾರತದ ಸ್ಮೃತಿ ಮಂದಾನ ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಮತ್ತೊಂದು ಶತಕದ ಸಾಧನೆ ಮೆರೆದಿದ್ದಾರೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ ಮಾಡುತ್ತಿದೆ. ಭಾರತವು 50 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 271 ರನ್‌ ಕಲೆಹಾಕಿದೆ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ (ಔಟಾಗದೇ 141 ರನ್‌) ಮತ್ತು ಶೆಫಾಲಿ ವರ್ಮಾ (ಔಟಾಗದೇ 128) ಶತಕ ದಾಖಲಿಸಿ ಆಡುತ್ತಿದ್ದಾರೆ.

ಭಾರತದ ವನಿತೆಯರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರು ಏಕದಿನ ಪಂದ್ಯಗಳ ಸರಣಿಯನ್ನು 3-0 ಯಿಂದ ಗೆದ್ದು ಕ್ಲೀನ್‌ಸ್ವೀಪ್‌ ಮಾಡಿದ್ದರು. ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಮುಖಭಂಗವಾಗಿತ್ತು. ಈ ಪಂದ್ಯದಲ್ಲಿ ಸ್ಮೃತಿ ಕ್ರಮವಾಗಿ 117, 136 ಮತ್ತು 90 ರನ್‌ ಗಳಿಸಿ ಮಿಂಚಿದ್ದರು.

ಇದೀಗ ಮತ್ತೆ ಟೆಸ್ಟ್‌ನಲ್ಲಿ ಭಾರತ ಆರಂಭಿಕ ಮೇಲುಗೈ ಸಾಧಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದಲ್ಲಿ ಯುವ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಉಮಾ ಚೆಟ್ರಿ, ಪ್ರಿಯಾ ಪೂನಿಯಾ, ಸೈಕಾ ಇಶಾಕ್, ಅರುಂಧತಿ ರೆಡ್ಡಿ ಮತ್ತು ಶಬ್ನಮ್ ಶಕೀಲ್ ಅವರು ಟೆಸ್ಟ್ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ