ರೋಹಿತ್ ಶರ್ಮಾ ಮಾಡಿದ ತಮಾಷೆಗೆ ಯಜುವೇಂದ್ರ ಚಾಹಲ್ ಮಾನ ಹರಾಜಾಯ್ತು!

ಬುಧವಾರ, 27 ಮೇ 2020 (08:46 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಮತ್ತು ಯಜುವೇಂದ್ರ ಚಾಹಲ್ ಆಗಾಗ ಸಾಮಾಜಿಕ ಜಾಲತಾಣ ಪುಟದಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ರೋಹಿತ್ ಮಾಡಿದ ತಮಾಷೆಗೆ ಯಜುವೇಂದ್ರ ಚಾಹಲ್ ಮಾನ ಮೂರು ಕಾಸಿಗೆ ಹರಾಜಾಗಿದೆ.


ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವರ್ಕೌಟ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿರುವ ರೋಹಿತ್, ಮೈದಾನದಲ್ಲಿ ಚಾಹಲ್ ಫೀಲ್ಡಿಂಗ್ ತಾಕತ್ತಿನ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಟ್ರೋಲ್ ಮಾಡಿದ್ದಾರೆ.

‘ಇದು ನಮ್ಮ ಹುಡುಗ ಚಾಹಲ್ ಫೀಲ್ಡಿಂಗ್ ಮಾಡುವ ರೀತಿ (ಜಂಪಿಂಗ್ ಮಾಡುತ್ತಾ) ಎಂದು ಬರೆದುಕೊಂಡಿರುವ ರೋಹಿತ್ ಕಪ್ಪೆ ಜಿಗಿತ ಮಾಡುವಂತೆ ಹಾರುವ ವಿಡಿಯೋ ಪ್ರಕಟಿಸಿದ್ದಾರೆ. ಈ ಮೂಲಕ ಚಾಹಲ್ ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಇದಕ್ಕೆ ಚಾಹಲ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ನೋಡಬೇಕು!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ