ದೈಹಿಕ ಕಸರತ್ತು ಶುರು ಮಾಡಿಕೊಂಡ ವಿರಾಟ್ ಕೊಹ್ಲಿ

ಬುಧವಾರ, 20 ಮೇ 2020 (10:05 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಗೆ ಎಷ್ಟು ಮಹತ್ವ ಕೊಡುತ್ತಾರೆಂದು ಎಲ್ಲರಿಗೂ ಗೊತ್ತು. ಕೊರೋನಾದಿಂದಾಗಿ ಮನೆಯಲ್ಲೇ ಇದ್ದರೂ ತಮ್ಮ ಫಿಟ್ನೆಸ್ ಮಾತ್ರ ಕೊಹ್ಲಿ ಮರೆತಿಲ್ಲ.


ಇದೀಗ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೈಟ್ ಲಿಫ್ಟಿಂಗ್ ಮಾಡಿ ದೇಹ ದಂಡಿಸುತ್ತಿರುವ ವಿಡಿಯೋ ಪ್ರಕಟಿಸಿದ್ದು ಮತ್ತೆ ತಾವು ಜಿಮ್ ಗೆ ಮರಳಿರುವುದನ್ನು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಕ್ರಿಕೆಟ್ ಪಂದ್ಯವಿಲ್ಲದೇ ಇದ್ದರೂ ಕ್ರಿಕೆಟಿಗರಿಗೆ ಫಿಟ್ನೆಸ್ ಕಾಯ್ದುಕೊಳ‍್ಳುವುದು ಮುಖ್ಯ. ಹೀಗಾಗಿ ಕೊಹ್ಲಿ ಬಿಡುವಿನ ವೇಳೆಯಲ್ಲೂ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುವುದರತ್ತ ಗಮನ ಹರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ