ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಯುವರಾಜ್ ಸಿಂಗ್-ಹೇಝಲ್ ಕೀಚ್?
‘ಪ್ರತೀ ಬಾರಿ ನಾನು ಕೊಂಚ ದಪ್ಪಗಾದಾಗ ನಾನು ಗರ್ಭಿಣಿ ಎಂಬ ಸುದ್ದಿ ಹಬ್ಬುತ್ತದೆ. ಇದು ಬಹುಶಃ ನಾಲ್ಕೋ-ಐದನೆಯ ಬಾರಿ ಇರಬೇಕು. ಆದರೆ ನನಗೆ ಕೊಂಚ ಮುಜುಗರವಾಗುತ್ತಿದೆ. ಆದರೆ ಈ ಸುದ್ದಿಗಳೆಲ್ಲಾ ನಿಜವಲ್ಲ’ ಎಂದು ಹೇಝಲ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಸೆಲೆಬ್ರಿಟಿಗಳು ಮದುವೆಯಾದ ಮೇಲೆ ಗರ್ಭಿಣಿ ಎಂಬ ರೂಮರ್ ಗಳು ಆಗಾಗ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೂ ಇಂತಹದ್ದೇ ಪ್ರಶ್ನೆ ಎದುರಾಗಿತ್ತು. ಈಗ ಯುವಿ ಪತ್ನಿ ಸರದಿ.