ಪ್ರಕೃತಿಯ ವಿಸ್ಮಯ ನೋಡಿ, ಕಾಂಡ ಕತ್ತರಿಸಿದರೂ ಫಲ ಬಿಟ್ಟ ಬಾಳೆಗಿಡ: ವಿಡಿಯೋ

Krishnaveni K

ಮಂಗಳವಾರ, 11 ಮಾರ್ಚ್ 2025 (12:05 IST)
ಸಾಮಾನ್ಯವಾಗಿ ಬಾಳೆಗಿಡ ಕಾಂಡ ಕತ್ತರಿಸಿದ ಮೇಲೆ ಫಲ ಬಿಡಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲು ಮುರಲೀಧರ ಶಾಸ್ತ್ರಿ ಎಂಬವರ ತೋಟದಲ್ಲಿ ಕಾಂಡ ಕತ್ತರಿಸಿದರೂ ಬಾಳೆ ಗಿಡ ಫಲ ಬಿಟ್ಟಿದೆ. ಕದಳಿ ಜಾತಿಯ ಬಾಳೆಗಿಡವನ್ನು ಗೊನೆಬಿಡುವ ಮೊದಲೇ ಕಾಂಡ ಕತ್ತರಿಸಲಾಗಿತ್ತು. ಹಾಗಿದ್ದರೂ ಅರ್ಧದಷ್ಟು ಭಾಗವನ್ನು ಹಾಗೆಯೇ ಬಿಡಲಾಗಿತ್ತು. ವಿಚಿತ್ರವೆಂದರೆ ಈಗ ಕಾಂಡದ ತಿರುಳಿನ ಭಾಗದಿಂದ ಗೊನೆ ಮೂಡಿದೆ. ಇಂತಹದ್ದೊಂದು ವಿಸ್ಮಯವಾಗುವುದು ಅಪರೂಪವೇ ಸರಿ. ಯಾರೋ ಫಿಕ್ಸ್ ಮಾಡಿಟ್ಟಂತೆ ಗೊನೆ ಮೂಡಿದೆ. ಸದ್ಯಕ್ಕೆ ಗೊನೆ ಆರೋಗ್ಯಕರವಾಗಿದ್ದು, ಇನ್ನೂ ಬೆಳವಣಿಗೆಯಾಗಬೇಕಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Sharvarikrishna (@diktalk)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ