ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ಈ ಬೀದಿ ಬದಿ ವ್ಯಾಪಾರಿಯ ಜಾಗೃತಿ ವಿಡಿಯೋ ನೋಡಿ

Krishnaveni K

ಗುರುವಾರ, 6 ಮಾರ್ಚ್ 2025 (10:35 IST)
ಬೆಂಗಳೂರು: ಮಾರ್ಚ್ ಬಂತೆಂದರೆ ಮಕ್ಕಳಿಗೆ ಪರೀಕ್ಷಾ ಕಾಲ. ಇಲ್ಲೊಬ್ಬ ಬೀದಿ ಬದಿ ವ್ಯಾಪಾರಿ ಮಕ್ಕಳ ಪರೀಕ್ಷೆಗೆ ಜಾಗೃತಿ ಮೂಡಿಸುವ ವಿಡಿಯೋವೊಂದು ಈಗ ವೈರಲ್ ಆಗಿದೆ.

ಬೀದಿ ಬದಿ ವ್ಯಾಪಾರಿಗಳು ಎಂದರೆ ಕೇವಲ ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡುವವರು, ಅವಿದ್ಯಾವಂತರು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅವರಲ್ಲೂ ಕೆಲವರು ಓದಿನ ಬಗ್ಗೆ ವಿಶೇಷ ಗೌರವವಿಟ್ಟುಕೊಂಡಿರುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ.

ಬೀದಿ ಬದಿ ವ್ಯಾಪಾರಿಗಳು ಮೈಕ್ ಹಾಕಿಕೊಂಡು ತರಕಾರಿ ರೇಟ್ ಘೋಷಣೆ ಮಾಡುವುದು ಸಹಜ. ಆದರೆ ಈ ವ್ಯಕ್ತಿ ಅದೇ ಮೈಕ್ ನಲ್ಲಿ ವಿದ್ಯಾರ್ಥಿಗಳೇ ಪರೀಕ್ಷೆ ಬಂತು ಚೆನ್ನಾಗಿ ಓದಿ, ಒಳ್ಳೆ ಅಂಕ ಪಡೆದುಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದ್ದಾನೆ.

ಈತನ ವಿಡಿಯೋ ನೋಡಿ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬೀದಿ ಬದಿ ವ್ಯಾಪಾರಿಗೂ ವಿದ್ಯೆಯ ಮಹತ್ವದ ಬಗ್ಗೆ ಎಷ್ಟು ಅರಿವಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

Viral video of street vendor pic.twitter.com/Xa1pJtqmmj

— Webdunia Kannada (@WebduniaKannada) March 6, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ