ಶೂ ಒಳಗೆ ಮಲಗಲು ಈ ಬೆಕ್ಕು ಪಡುತ್ತಿರುವ ಹರಸಾಹಸದ ಕ್ಯೂಟ್ ವಿಡಿಯೋ ನೋಡಿ

Krishnaveni K

ಸೋಮವಾರ, 10 ಮಾರ್ಚ್ 2025 (10:52 IST)
ಬೆಂಗಳೂರು: ಬೆಕ್ಕುಗಳು ಬೆಚ್ಚಗೆ ಇರಲು ಇಷ್ಟಪಡುತ್ತವೆ. ಅದೇ ರೀತಿ ಇಲ್ಲಿ ಒಂದು ಬೆಕ್ಕು ಶೂ ಒಳಗೆ ಮಲಗಲು ಹರಸಾಹಸಪಡುತ್ತಿರುವ ಕ್ಯೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಳಿಗಾಲದಲ್ಲಿ ಮಾತ್ರವಲ್ಲ, ಬೆಕ್ಕುಗಳು ಯಾವುದೇ ಕಾಲದಲ್ಲೂ ಬೆಚ್ಚಗೆ ಇರುವ ಜಾಗವನ್ನೇ ಹುಡುಕಿಕೊಳ್ಳುತ್ತವೆ. ಹಳ್ಳಿಗಳ ಕಡೆ ಉರಿಯುವ ಒಲೆ, ಅಡುಗೆ ಮನೆ ಅವುಗಳ ಮೆಚ್ಚಿನ ತಾಣಗಳು.

ಇಲ್ಲೊಂದು ಬೆಕ್ಕು ಶೂ ಒಳಗೇ ಮಲಗಲು ಪ್ರಯತ್ನಿಸುತ್ತಿವೆ. ಒಂದು ಶೂ ಒಳಗೆ ಈಗಾಗಲೇ ಒಂದು ಪುಟಾಣಿ ಬೆಕ್ಕು ಮಲಗಿರುತ್ತದೆ. ಅದರ ಪಕ್ಕದಲ್ಲೇ ಇನ್ನೊಂದು ಶೂ ಖಾಲಿಯಿರುತ್ತದೆ. ಈಗ ಮತ್ತೊಂದು ಬೆಕ್ಕು ಬಂದು ಖಾಲಿಯಿರುವ ಶೂನಲ್ಲಿ ಮಲಗಲು ಪ್ರಯತ್ನಿಸುತ್ತದೆ.

ಏನೇ ಮಾಡಿದರೂ ಆರಂಭದಲ್ಲಿ ಬೆಕ್ಕಿಗೆ ಒಳಗೆ ಹೊಕ್ಕಿ ಮಲಗಲು ಕಷ್ಟವಾಗುತ್ತದೆ. ಆದರೂ ಬೆಕ್ಕು ಸುಮ್ಮನೇ ಕೂರುವುದಿಲ್ಲ. ಮರಳಿ ಪ್ರಯತ್ನ ಮಾಡಿ ಕೊನೆಗೂ ಒಳಗೆ ಮಲಗಲು ಯಶಸ್ವಿಯಾಗುತ್ತದೆ. ಈ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ.


#ViralVideo #Cat pic.twitter.com/JQFcnbFt0y

— Webdunia Kannada (@WebduniaKannada) March 10, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ