ದೈನಂದಿನ ಲಸಿಕೆ ನೀಡಿಕೆಯಲ್ಲಿ ಕುಸಿತ!

ಮಂಗಳವಾರ, 13 ಜುಲೈ 2021 (12:22 IST)
ನವದೆಹಲಿ(ಜು.13): ದೇಶಾದ್ಯಂತ ಶೀಘ್ರ ಕೊರೋನಾ ವೈರಸ್ನ 3ನೇ ಅಲೆ ಆರಂಭವಾಗಲಿದೆ ಎಂಬ ಭೀತಿ ನಡುವೆಯೇ, ಜೂ.21ರಂದು ತೀವ್ರಗೊಂಡಿದ್ದ ಲಸಿಕೆ ನೀಡಿಕೆ ಪ್ರಕ್ರಿಯೆ ಈಗ ಕುಸಿತ ಕಾಣುತ್ತಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

* ದೇಶಾದ್ಯಂತ ಶೀಘ್ರ ಕೊರೋನಾ ವೈರಸ್ನ 3ನೇ ಅಲೆ ಆರಂಭ
* ದೈನಂದಿನ ಲಸಿಕೆ ನೀಡಿಕೆಯಲ್ಲಿ ಕುಸಿತ
* ದೈನಂದಿನ 61 ಲಕ್ಷ ಡೋಸ್ ಪ್ರಮಾಣ 41 ಲಕ್ಷಕ್ಕೆ ಇಳಿಕೆ

ಕೋವಿನ್ ವೇದಿಕೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಜೂ.21-27ರವರೆಗಿನ ವಾರದಲ್ಲಿ ನಿತ್ಯ ಸರಾಸರಿ 61.14 ಲಕ್ಷ ಡೋಸ್ಗಳನ್ನು ನೀಡಲಾಗಿತ್ತು. ಆದರೆ ಜೂ.28ರಿಂದ ಜು.4ಕ್ಕೆ ಅಂತ್ಯವಾದ ವಾರದಲ್ಲಿ ನಿತ್ಯ 41.92 ಲಕ್ಷ ಡೋಸ್ಗಳನ್ನಷ್ಟೇ ನೀಡಲಾಗಿದೆ. ಅಲ್ಲದೆ ಜು.5ರಿಂದ ಜು.11ರವರೆಗೆ ಸರಾಸರಿ 34.32 ಲಕ್ಷ ಡೋಸ್ಗಳನ್ನಷ್ಟೇ ನೀಡಲಾಗಿದೆ ಎಂದು ಸರ್ಕಾರದ ದಾಖಲೆಗಳಿಂದ ಗೊತ್ತಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಹರಾರಯಣ, ಗುಜರಾತ್ ಮತ್ತು ಛತ್ತೀಸ್ಗಢದಲ್ಲಿ ಲಸಿಕೆ ನೀಡಿಕೆಯ ಪ್ರಮಾಣ ಕುಸಿದಿದೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ, ‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆ ಮಾಡಬಹುದಾದ 1.54 ಕೋಟಿಯಷ್ಟುಲಸಿಕೆ ಡೋಸ್ಗಳು ಬಾಕಿ ಉಳಿದುಕೊಂಡಿವೆ’ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ