ಇತ್ತೀಚೆಗಿನ ಕೆಲವು ವರ್ಷಗಳಿಂದ ಹೃದಯದ ಸಮಸ್ಯೆಯಂತೇ ಕ್ಯಾನ್ಸರ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ಜೀವನಶೈಲಿಯಿಂದ ಬರುವ ರೋಗಗಳು ಹೆಚ್ಚಾಗಿದ್ದು ಅದರಲ್ಲಿ ಕ್ಯಾನ್ಸರ್ ಕೂಡಾ ಒಂದಾಗಿದೆ.
ನಮ್ಮ ಒತ್ತಡದ ಜೀವನ ಶೈಲಿ ಮತ್ತು ಆಹಾರ ಶೈಲಿಗಳಿಂದಾಗಿ ಕ್ಯಾನ್ಸರ್ ಬರಬಹುದಾಗಿದೆ. ಕ್ಯಾನ್ಸರ್ ರೋಗ ಆರಂಭಿಕ ಹಂತದಲ್ಲಿದ್ದರೆ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಹೀಗಾಗಿ ಇದನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಮುಖ್ಯವಾಗಿದೆ.
ಕ್ಯಾನ್ಸರ್ ಕಣ ನಮ್ಮ ದೇಹವನ್ನು ಹೊಕ್ಕರೆ ಅದರ ಕೆಲವು ಲಕ್ಷಣಗಳು ದೇಹದಲ್ಲಿ ಕಂಡುಬರುತ್ತವೆ. ತಜ್ಞರು ಹೇಳುವ ಪ್ರಕಾರ ಈ ಐದು ಲಕ್ಷಣಗಳು ಕ್ಯಾನ್ಸರ್ ನ ಆರಂಭಿಕ ಸೂಚನೆಯಾಗಿರುತ್ತದೆ. ಅವುಗಳು ಯಾವುವು ಎಂದು ಗಮನಿಸಿ.
-ಮೂತ್ರ ವಿಸರ್ಜಿಸುವಾಗ ರಕ್ತ ಸ್ರಾವ ಅಥವಾ ಅಸಹಜತೆ -ಮೂಗು, ಗರ್ಭಕೋಶ,ಬಾಯಿಯಿಂದ ಅಸಹಜವಾಗಿ ರಕ್ತಸ್ರಾವವಾಗುವುದು -ಊತ/ಗಡ್ಡೆ ಅಥವಾ ದೇಹದ ಯಾವುದಾದರೂ ಭಾಗದಲ್ಲಿ ಗಂಟುಗಳು ಕಾಣಿಸಿಕೊಂಡು ಸಾಮಾನ್ಯ ಚಿಕಿತ್ಸೆಯಿಂದ ಗುಣವಾಗದೇ ಇದ್ದರೆ -ಚರ್ಮದ ಬಣ್ಣ ಬದಲಾಗುವುದು ಅಸಹಜವಾಗುವುದು -ಕಾರಣವಿಲ್ಲದೇ ಜ್ವರ ಬರುವುದು ಮತ್ತು ಇದ್ದಕ್ಕಿದ್ದಂತೆ ತೂಕ ಕಳೆದುಕೊಳ್ಳುವುದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ಎಷ್ಟೋ ರೋಗಿಗಳು ಇಂತಹ ಆರಂಭಿಕ ಲಕ್ಷಣಗಳನ್ನು ಅಲಕ್ಷಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ.