ಹೃದಯಾಘಾತ ಹೆಚ್ಚಾಗಲು ಕಾರಣವೇನು: ಡಾ ಸಿಎನ್ ಮಂಜುನಾಥ್ ಹೇಳುವುದೇನು

Krishnaveni K

ಸೋಮವಾರ, 14 ಜುಲೈ 2025 (10:14 IST)
ಭಾರತದಲ್ಲಿ ಇತ್ತೀಚೆಗಿನ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಇದರ ನಡುವೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರು ಸಂವಾದವೊಂದರಲ್ಲಿ ಹೇಳಿದ ಈ ಮಾತು ಭಾರತದಲ್ಲಿ ಹೃದಯಾಘಾತ ಹೆಚ್ಚಲು ಕಾರಣವೇನು ಎಂದು ತಿಳಿಸುತ್ತದೆ.

ಡಾ ಸಿಎನ್ ಮಂಜುನಾಥ್ ಹೇಳುವ ಪ್ರಕಾರ ದೇಹ ಐಸ್ ಕ್ರೀಂ ಇದ್ದಂಗೆ. ತಿಂದರೂ ಕರಗುತ್ತದೆ, ತಿನ್ನದೇ ಇದ್ದರೂ ಕರಗುತ್ತೆ.  ಆದರೆ ನಮ್ಮ ದೇಹ ಸರಿಯಾದ ರೀತಿಯಲ್ಲಿ ಕರಗಬೇಕು. ಅಂದರೆ ಮಾತ್ರ ನಮ್ಮ ದೇಹ, ಹೃದಯ ಆರೋಗ್ಯವಾಗಿರಲು ಸಾಧ್ಯ.

ದಿನಕ್ಕೆ ಮುಕ್ಕಾಲು ಗಂಟೆಯಷ್ಟಾದರೂ ನಡೆಯಬೇಕು. ನಾವು ತಿಂದ ಆಹಾರವನ್ನು ಸರಿಯಾದ ರೀತಿಯಲ್ಲಿ ಜೀರ್ಣಿಸಿಕೊಳ್ಳುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು. ಎಲ್ಲಕ್ಕಿಂತ ದೊಡ್ಡ ಶತ್ರು ಎಂದರೆ ನಮ್ಮ ಕೋಪ, ಒತ್ತಡ.

ನೀವು ಯಾರ ಮೇಲಾದರೂ ಕೋಪ ಬಂದಾಗ ಸರಿಯಾಗಿ ದಬಾಯಿಸಿಬಿಡುತ್ತೀರಿ. ನಿಮಗೂ ಮನಸ್ಸಿನಲ್ಲಿದ್ದ ಸಿಟ್ಟನ್ನೆಲ್ಲಾ ಹೊರಹಾಕಿದ ತೃಪ್ತಿ ಇರಬಹುದು. ಆದರೆ ನೀವು ಬೈದಾಗ ಅದರ ನೇರ ಪರಿಣಾಮವಾಗುವುದು ನಿಮಗೇ ಎನ್ನುವುದನ್ನು ಮರೆಯಬಾರದು. ಸಿಟ್ಟು ಮಾಡಿಕೊಂಡಾಗ ಸಹಜವಾಗಿಯೇ ಬ್ಲಡ್ ಪ್ರೆಷರ್ ಹೆಚ್ಚಾಗುತ್ತದೆ. ಇದು ನೇರವಾಗಿ ಪರಿಣಾಮ ಬೀರುವುದು ನಿಮ್ಮ ಹೃದಯಕ್ಕೆ. ಹೀಗಾಗಿ ಆದಷ್ಟು ಶಾಂತವಾಗಿ ಮತ್ತು ಸಂತೋಷದಿಂದ ಕಾಲ ಕಳೆಯುವುದನ್ನು ನೋಡಬೇಕು ಎನ್ನುತ್ತಾರೆ ಅವರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ