ಡಾ ದೇವಿ ಪ್ರಸಾದ್ ಶೆಟ್ಟಿಯವರ ಪ್ರಕಾರ ಸಡನ್ ತೂಕ ಇಳಿಕೆ ಮಾಡಿದರೆ ಏನಾಗುತ್ತದೆ

Krishnaveni K

ಗುರುವಾರ, 24 ಜುಲೈ 2025 (08:46 IST)
Photo Credit: X
ಕೆಲವರು ತೂಕ ಇಳಿಕೆ ಮಾಡಬೇಕೆಂದು ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಾರೆ. ಆದರೆ ತೂಕ ಇಳಿಕೆ ಇದ್ದಕ್ಕಿದ್ದಂತೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡುವುದರಿಂದ ಏನಾಗುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಪ್ರಸಾದ್ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಹುತೇಕ ಮಂದಿಗೆ ಜೀವನ ಶೈಲಿ, ಹಾರ್ಮೋನ್ ಬದಲಾವಣೆಯಿಂದ ತೂಕ ಹೆಚ್ಚಳವಾಗಬಹುದು. ಇನ್ನು ಕೆಲವರಿಗೆ ವಂಶವಾಹೀಯಾಗಿ ದೇಹ ತೂಕ ಹೆಚ್ಚಾಗುತ್ತದೆ. ಮತ್ತೆ ಕೆಲವರಿಗೆ ಕೆಲವು ಔಷಧಗಳ ಸೇವನೆಯಿಂದಾಗಿ ತೂಕ ಹೆಚ್ಚಳವಾಗುತ್ತದೆ.

ಆದರೆ ತೂಕ ಇಳಿಸಬೇಕು ಎನ್ನುವವರು ಡಾ ದೇವಿ ಶೆಟ್ಟಿಯವರು ಹೇಳುವ ಈ ಅಂಶವನ್ನು ನೆನಪಿನಲ್ಲಿಡುವುದು ಮುಖ್ಯ. ತೂಕ ಇಳಿಕೆ ಮಾಡುವುದು ತಪ್ಪಲ್ಲ. ಖಂಡಿತವಾಗಿಯೂ ದೇಹ ತೂಕ ಹೆಚ್ಚಾಗಿದ್ದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳಲೇಬೇಕು. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ಆದರೆ ಇದ್ದಕ್ಕಿದ್ದಂತೆ ತೂಕ ಇಳಿಕೆ ಮಾಡಿಕೊಳ್ಳಲು ಆಗಲ್ಲ. ಆ ರೀತಿ ದಾರಿ ಕಂಡುಕೊಂಡರೆ ಅದರಿಂದ ಅಪಾಯವೇ ಹೆಚ್ಚು. ದಿಡೀರ್ ಆಗಿ ತೂಕ ಇಳಿಕೆ ಮಾಡುವ ದಾರಿ ಹಿಡಿದರೆ ಪಿತ್ತಕೋಶದ ಕಲ್ಲು ಇತ್ಯಾದಿ ಆರೋಗ್ಯ ಸಮಸ್ಯೆ ಎದುರಾದೀತು. ಒಬ್ಬ ವ್ಯಕ್ತಿ ನಿಧಾನವಾಗಿ ಅಂದರೆ 6-8 ತಿಂಗಳ ಅವಧಿ ತೆಗೆದುಕೊಂಡು ತೂಕ ಇಳಿಸಿಕೊಳ್ಳಬೇಕು. ಆಗ ಸಮಸ್ಯೆಯಾಗಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ