Eclipse 2025: 2025 ರಲ್ಲಿ ಎಷ್ಟು ಗ್ರಹಣಗಳಿವೆ, ಮೊದಲ ಗ್ರಹಣ ಯಾವಾಗ

Krishnaveni K

ಬುಧವಾರ, 1 ಜನವರಿ 2025 (08:37 IST)
ಬೆಂಗಳೂರು: 2025 ರಲ್ಲಿ ಒಟ್ಟು ಎಷ್ಟು ಗ್ರಹಣಗಳಿವೆ ಅವುಗಳ ಪೈಕಿ ಎಷ್ಟು ಭಾರತದಲ್ಲಿ ಗೋಚವರಾಗಲಿದೆ ಮತ್ತು ಯಾವಾಗ ಯಾವ ಗ್ರಹಣವಿರಲಿದೆ ಎಂಬುದ ಮಾಹಿತಿ ಇಲ್ಲಿದೆ.
 

2025 ನೇ ವರ್ಷ ಇಂದು ಆರಂಭವಾಗಿದ್ದು, ಈ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಈ ಪೈಕಿ ಮೊದಲನೆಯ ಗ್ರಹಣ ಸಂಭವಿಸಲಿರುವುದು ಮಾರ್ಚ್ ನಲ್ಲಿ ಆದರೆ ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸಂಭವಿಸುವ ಚಂದ್ರ ಗ್ರಹಣ ಮಾತ್ರ ದರ್ಶನವಾಗಲಿದೆ. ಅಂದರೆ ಒಟ್ಟು ನಾಲ್ಕು ಗ್ರಹಣಗಳ ಪೈಕಿ ಒಂದು ಗ್ರಹಣ ಮಾತ್ರ ಭಾರತದಲ್ಲಿ ಗೋಚರವಾಗುವುದು. ಒಟ್ಟು ನಾಲ್ಕು ಗ್ರಹಣಗಳ ಪೈಕಿ ಎರಡು ಸೂರ್ಯ ಗ್ರಹಣ, ಎರಡು ಚಂದ್ರಗ್ರಹಣವಾಗಿದೆ.

ಮಾರ್ಚ್ ನಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣ

ಮಾರ್ಚ್ 13-14 ರಂದು ಚಂದ್ರಗ್ರಹಣವಾಗಲಿದ್ದು ಇದು ಭಾರತದಲ್ಲಿ ಗೊಚರವಾಗುವುದಿಲ್ಲ. ಬದಲಾಗಿ ಏಷ್ಯಾದ ಕೆಲವು ಭಾಗ, ಯುರೋಪ್, ಆಸ್ಟ್ರೇಲಿಯಾದ ಕೆಲವು ಭಾಗ, ದಕ್ಷಿಣ ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಭಾಗಗಳಲ್ಲಿ ಗೋಚರವಾಗಲಿದೆ.

ಮಾರ್ಚ್ 29 ರಂದು ಸೂರ್ಯಗ್ರಹಣವಾಗಲಿದ್ದು, ಈ ಗ್ರಹಣ ಉತ್ತರ ಏಷ್ಯಾ, ಯುರೋಪ್, ಆಫ್ರಿಕಾ ಮತ್ತು ಉತ್ತರ ಅಮೆರಿಕಾದ ಕೆಲವು ಭಾಗಗಳಲ್ಲಿ, ಅಟ್ಲಾಂಟಿಕ್, ಆರ್ಕ್ ಟಿಕ್ ಭಾಗಗಳಲ್ಲಿ ಗೋಚರವಾಗಲಿದೆ.

ಸೆಪ್ಟೆಂಬರ್ 7-8 ರಂದು ಚಂದ್ರಗ್ರಹಣ
ಈ ಗ್ರಹಣವು ಭಾರತದಲ್ಲಿ ಗೋಚರವಾಗಲಿದೆ. ಪೂರ್ಣಚಂದ್ರಗ್ರಹಣ ಇದಾಗಿದ್ದು, ಭಾರತದ ಹೊರತಾಗಿ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ಭಾಗಗಳು, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್,  ಅಂಟಾರ್ಟಿಕಾದಲ್ಲಿ ಗೋಚರವಾಗಲಿದೆ.

ಸೆಪ್ಟಂಬರ್ 21 ರಂದು ಕೊನೆಯ ಗ್ರಹಣ
ಸೆಪ್ಟೆಂಬರ್ 21 ರಂದು ಸಂಭವಿಸಲಿರುವ ಸೂರ್ಯ ಗ್ರಹಣ ವರ್ಷದ ಕೊನೆಯ ಗ್ರಹಣವಾಗಿದೆ. ಆಸ್ಟ್ರೇಲಿಯಾದ ದಕ್ಷಿಣ ಭಾಗ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಮಾತ್ರ ಗೋಚರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ