ಬೆಂಗಳೂರು: ಜನವರಿ 1 ಹೊಸ ವರ್ಷದಂದು ಜನಿಸುವ ಮಕ್ಕಳಿಗೆ ಬರ್ತ್ ಡೇ ಯಾವತ್ತೂ ಸ್ಪೆಷಲ್ ಆಗಿರುತ್ತದೆ. ಜನವರಿ 1 ಹೊಸ ವರ್ಷದಂದು ಜನಿಸುವ ಮಕ್ಕಳಿಗೆ ವಿಶೇಷವಾಗಿ ಯಾವ ಹೆಸರುಗಳು ಸೂಕ್ತವಾಗುತ್ತದೆ ನೋಡಿ.
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ 1 ಎನ್ನುವುದು ಶ್ರೇಷ್ಠ ಸಂಖ್ಯೆಯಾಗಿದ್ದು, ಈ ಸಂಖ್ಯೆಯಲ್ಲಿ ಜನಿಸಿದ ಮಕ್ಕಳು ಸರ್ಕಾರೀ ವೃತ್ತಿ ಅಥವಾ ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸು ಹೊಂದುತ್ತಾರೆ. ಈ ದಿನದಂದು ಹುಟ್ಟುವ ಮಕ್ಕಳು ಸೂರ್ಯನ ಕುರಿತಾಗಿ ಪ್ರಾರ್ಥನೆ ಮಾಡುವುದು ಉತ್ತಮ.
ಹೊಸ ವರ್ಷ ಎನ್ನುವುದು ಹೊಸದರ ಆರಂಭ. ಹೊಸ ಭರವಸೆಗಳ ಆರಂಭ. ಹೀಗಾಗಿ ಈ ದಿನದಂದು ಜನಿಸುವ ಮಕ್ಕಳು ಜೀವನದಲ್ಲಿ ಹೊಸ ಭರವಸೆಯನ್ನು ಹೊತ್ತು ತರುತ್ತಾರೆ ಎಂಬ ನಂಬಿಕೆ. ಯಾವುದೇ ಜಾತಿ, ಧರ್ಮವಾಗಿರಲಿ, ಈ ದಿನದಂದು ಜನಿಸುವ ಮಕ್ಕಳ ಹೆಸರೂ ಹೊಸ ಭರವಸೆ ಎಂಬ ಅರ್ಥ ಕೊಡುವಂತಿರಲಿ.
ಯಾವ ಹೆಸರು ಸೂಕ್ತ?
ಹೊಸ ವರ್ಷದಂದು ಜನಿಸುವ ಮಕ್ಕಳಿಗೆ ಆಕಾಂಕ್ಷ, ಔರಾ, ಅಮಲಾ, ಸಂತೋಷ್, ಸಮೃದ್ಧಿ, ಅಕ್ಷಯ, ಸಂಪ್ರೀತಿ, ಸಂತೃಪ್ತಿ, ರೇಯಾಂಶ್, ವಿಹಾನ್, ಇಶಾನ್, ಆದಿ, ಅರ್ಜುನ್, ಆರವ್, ಯಶ್, ಓಂ, ಸಮರ್ಥ, ಸಿದ್ಧಾರ್ಥ್, ಅನಯ್, ಖುಷಿ, ಲಕ್ಷ್ಯ, ಆರುಷ್, ತೇಜಸ್, ಸೂರ್ಯಾಂಶ್, ಚೈತನ್ಯ, ಧ್ರುವ, ರೋಹನ್, ಸಿದ್ಧಿ, ತನಿಷ್ ಇತ್ಯಾದಿ ಹೆಸರುಗಳನ್ನು ಇಡುವುದು ಸೂಕ್ತ. ಯಾವುದೇ ಹೆಸರು ಸಮೃದ್ಧಿ, ಭರವಸೆ, ಆಶಾದಾಯಕ ಮನೋಭಾವವನ್ನು ತೋರಿಸುತ್ತದೆ. ಆ ಹೆಸರುಗಳನ್ನು ಈ ದಿನ ಜನಿಸಿದವರಿಗೆ ಇಡುವುದು ಸೂಕ್ತವಾಗಿದೆ.
ಜನವರಿ 1 ಎನ್ನುವುದು ಭರವಸೆಯ ದಿನವಾಗಿದೆ. ಈ ದಿನ ಜನಿಸಿದ ಮಕ್ಕಳೂ ಜೀವನದಲ್ಲಿ ಮಹತ್ವಾಕಾಂಕ್ಷೆಗಳನ್ನು ಹೊಂದಿರುತ್ತಾರೆ. ಜೀವನೋತ್ಸಾಹಿಗಳು, ತುಂಬಾ ಚುರುಕು ಬುದ್ಧಿಯುಳ್ಳವರೂ ಆಗಿರುತ್ತಾರೆ. ಜನವರಿ 1 ಇದೇ ಕಾರಣಕ್ಕೆ ವಿಶೇಷವಾಗಿದೆ.