ನೌಕರಿ ಸಿಗುತ್ತಿಲ್ಲವೇ? ಅದಕ್ಕೆ ಈ ತಪ್ಪುಗಳೂ ಕಾರಣವಿರಬಹುದು!

ಶುಕ್ರವಾರ, 24 ನವೆಂಬರ್ 2017 (08:21 IST)
ಬೆಂಗಳೂರು: ಎಷ್ಟೇ ಅರ್ಹತೆಯಿದ್ದರೂ, ಎಷ್ಟೋ ಕಂಪನಿಗಳಿಗೆ ಅಲೆದೂ ಕೆಲಸ ಸಿಕ್ಕಿಲ್ಲವೆಂದು ಬೇಸರವೇ? ಅದಕ್ಕೆ ನಿಮ್ಮ ರೆಸ್ಯೂಮ್ ನಲ್ಲಿರುವ ಕೆಲವು ತಪ್ಪುಗಳೂ ಕಾರಣಗಳಿರಬಹುದು. ಅವು ಯಾವುವು ನೋಡೋಣ.
 

ಅಕ್ಷರ ತಪ್ಪುಗಳು
ರೆಸ್ಯೂಮ್ ಬರೆಯುವಾಗ ಮಾಡುವ ಕೆಲವು ಅಕ್ಷರ ತಪ್ಪುಗಳು ನಿಮ್ಮ ಕೆಲಸಕ್ಕೆ ಚ್ಯುತಿ ತರಬಹುದು. ನಾವು ನೀಡುವ ರೆಸ್ಯೂಮ್ ನಲ್ಲಿ ಮೊದಲ ನೋಟದಲ್ಲೇ ಸ್ಪೆಲ್ಲಿಂಗ್ ಮಿಸ್ಟೇಕ್ ಕಂಡುಬಂದರೆ ಅಲ್ಲೇ ನಿಮ್ಮನ್ನು ಅಳೆಯಲಾಗುತ್ತದೆ. ಹಾಗಾಗಿ ಭಾಷೆ ಶುದ್ಧವಾಗಿರಲಿ.

ಅನಗತ್ಯ ವಿವರಗಳು
ಹಸಿವಾದಾಗ ಎಷ್ಟು ಊಟ ಮಾಡಬೇಕೋ ಅಷ್ಟೇ ಮಾಡಬೇಕು. ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಅಮೃತವೂ ವಿಷ ಎನ್ನಲಾಗುತ್ತದೆ. ಹಾಗೆಯೇ ರೆಸ್ಯೂಮ್ ನಲ್ಲಿ ನೀವು ಸಲ್ಲಿಸುವ ಕೆಲಸಕ್ಕೆ ಬೇಡವೆನಿಸುವ ವಿವರಣೆಗಳನ್ನೆಲ್ಲಾ ತುಂಬಿದರೆ ರೆಸ್ಯೂಮ್ ನೋಡುವವರಿಗೆ ಇಷ್ಟವಾಗದು. ಯಾವುದೋ ಕಂಪನಿ ಕೆಲಸಕ್ಕೆ ಅರ್ಜಿ ಹಾಕುವಾಗ ನಿಮ್ಮ ನೃತ್ಯ ಸ್ಪರ್ಧೆಯ, ಹಾಡಿನ ಸ್ಪರ್ಧೆಯ ವಿವರಗಳನ್ನೆಲ್ಲಾ ಕೊಡಬೇಕಾಗಿಲ್ಲ.

ಡಿಸೈನ್
ರೆಸ್ಯೂಮ್ ಸರಳ ಸುಂದರವಾಗಿದ್ದರೆ ಸಾಕು. ಅನಗತ್ಯ ಡಿಸೈನ್ ಮಾಡಲು ಹೋದರೆ ಅದು ಅಂದಗೆಡಬಹುದು. ನೋಡುವವರಿಗೆ ಇಂಪ್ರೆಷನ್ ಮೂಡಿಸದು.

ತುಂಬಾ ವಿವರಣೆ
ನೀವು ಮೊದಲು ಮಾಡಿದ ಕೆಲಸದ ಬಗ್ಗೆ, ನಿಮ್ಮ ಆಸಕ್ತಿಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ವಿವರಣೆ ನೋಡಿದರೆ ಓದುವವರಿಗೆ ಆಕಳಿಕೆ ಬರಬಹುದು. ಏನೇ ವಿವರಗಳಿದ್ದರೂ ಚಿಕ್ಕದಾಗಿ ಮುಗಿಸಿ.

ಅಪ್ ಡೇಟ್ ಮಾಡಿ
ಔಟ್ ಡೇಟೆಡ್ ರೆಸ್ಯೂಮ್ ನೀಡಬೇಡಿ. ಲೇಟೆಸ್ಟ್ ವಿಧಾನಕ್ಕೆ ತಕ್ಕಂತೆ ರೆಸ್ಯೂಮ್ ಡಿಸೈನ್ ಮಾಡಿ. ಅದಕ್ಕೆ ಅಂತರ್ಜಾಲದ ಸಹಾಯ ಪಡೆದುಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ