ಬೆಂಗಳೂರು (ಆ.17): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸುವ ಸಾರ್ವಜನಿಕರು ಇನ್ನು ಮುಂದೆ ಮೊಬೈಲ್ಗಳನ್ನು ತರುವಂತಿಲ್ಲ. ಆರ್.ಟಿ.ನಗರದಲ್ಲಿರುವ ಅವರ ನಿವಾಸದ ಬಳಿ ಮೊಬೈಲ್ ನಿಷೇಧಿಸಲಾಗಿದೆ ಎಂಬ ಫಲಕ ಅಳವಡಿಸಲಾಗಿದೆ. ಭೇಟಿ ಮಾಡಲು ಬರುವ ಸಾರ್ವಜನಿಕರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ಪಡೆದುಕೊಳ್ಳಲು ಮುಂದಾಗುತ್ತಿರುವುದರಿಂದ ಅಹವಾಲು ಅಲಿಸಲು ತೊಂದರೆಯಾಗುತ್ತಿದೆ.
ಇದನ್ನು ತಡೆಗಟ್ಟುವ ಸಂಬಂಧ ಮೊಬೈಲ್ ನಿಷೇಧಿಸಲಾಗಿದೆ. ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಅನಗತ್ಯ ಖರ್ಚು ಹೆಚ್ಚಾಗಿ ನಡೆಯುತ್ತದೆ. ಅದೆಷ್ಟೇ ಸರಳ ಕಾರ್ಯಕ್ರಮವಾದರೂ ಹೂವು, ಹಣ್ಣು ಹಂಪಲು, ತುರಾಯಿ ಎಂದು ಹಣ ವ್ಯಯಿಸಲಾಗುತ್ತದೆ. ಆದರೀಗ ಈ ವಿಧಿ ವಿಧಾನಗಳಿಗೆ ಬ್ರೇಕ್ ಹಾಕಿರುವ ಕರ್ನಾಟಕ ಸಿಎಂ ಬೊಮ್ಮಾಯಿ ಎಲ್ಲಾ ಖರ್ಚುಗಳಿಗೆ ತಡೆ ಹಾಕಿದ್ದಾರೆ.