ಮೈಸೂರು ದಸರಾ; ವಾಟರ್‌ ಜೆಟ್‌ನಿಂದ ಕೆರೆಗೆ ಬಿದ್ದ ಸಚಿವ!

ಗುರುವಾರ, 29 ಸೆಪ್ಟಂಬರ್ 2011 (16:55 IST)
ನಾಡಹಬ್ಬ ದಸರಾ ಅಂಗವಾಗಿ ಇಲ್ಲಿನ ವರುಣಾ ಕೆರೆಯಲ್ಲಿ ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ ಅವರು ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ನೀಡಿದ ಸಂದರ್ಭದಲ್ಲಿ ವಾಟರ್ ಜೆಟ್‌ನಿಂದ ನೀರಿಗೆ ಬಿದ್ದ ಪ್ರಸಂಗ ಗುರುವಾರ ನಡೆಯಿತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

401ನೇ ದಸರಾ ಮಹೋತ್ಸವದ ಎರಡನೇ ದಿನವಾದ ಇಂದು ವರುಣಾ ಕೆರೆಯಲ್ಲಿ ವಾಟರ್ ಸ್ಫೋರ್ಟ್ಸ್‌ಗೆ ಚಾಲನೆ ಕೊಡುವಂತೆ ಸಚಿವ ರಾಜೂ ಗೌಡ ಅವರಿಗೆ ಆಹ್ವಾನ ನೀಡಲಾಗಿತ್ತು.

ಅದರಂತೆ ಸಚಿವರಾದ ರಾಮದಾಸ್, ರಾಜೂ ಗೌಡ ವರುಣಾ ಕೆರೆಯಲ್ಲಿ ವಾಟರ್ ಜೆಟ್‌ನಲ್ಲಿ ಭರ್ಜರಿಯಾಗಿ ಪೋಸ್ ನೀಡಿ ಸವಾರಿ ನಡೆಸಿದರು. ರಾಜೂ ಗೌಡ ಅವರ ಬೆನ್ನಹಿಂದೆ ವಾಟರ್ ಜೆಟ್‌ನ ತರಬೇತುಗಾರ್ತಿ ಯುವತಿ ಕೂಡ ಇದ್ದಿದ್ದಳು. ಈ ಜೋಶ್‌ನಲ್ಲಿ ಸಚಿವರು ವಾಟರ್ ಜೆಟ್ ಅನ್ನು ಜೋರಾಗಿಯೇ ಓಡಿಸಿದ್ದರು.

ಇನ್ನೇನು ದಡ ಸೇರುತ್ತಾರೆ ಎಂಬಷ್ಟರಲ್ಲಿ ಮಧ್ಯ ಕೆರೆಯಲ್ಲಿಯೇ ವಾಟರ್ ಜೆಟ್ ಪಲ್ಟಿ ಹೊಡೆದ ಪರಿಣಾಮ ಸಚಿವ ರಾಜೂ ಗೌಡ, ತರಬೇತುಗಾರ್ತಿ ಕೆರೆಗೆ ಬಿದ್ದು ಬಿಟ್ಟರು. ಆದರೆ ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಅಪಾಯವಾಗಿರಲಿಲ್ಲ. ಅಷ್ಟರಲ್ಲಿಯೇ ರಾಜೂ ಗೌಡ ಈಜಿ ಸುರಕ್ಷಿತವಾಗಿ ದಡ ಸೇರಿದರು.

ವೆಬ್ದುನಿಯಾವನ್ನು ಓದಿ