ಮೈಸೂರು ದಸರಾ 'ದರ್ಬಾರ್'

ಶುಕ್ರವಾರ, 18 ಸೆಪ್ಟಂಬರ್ 2009 (19:18 IST)
NRB
ದಸರಾ ಹಬ್ಬ ಮೈಸೂರು ಸೇರಿದಂತೆ ಭಾರತದ ಉತ್ತರ ಭಾಗಗಳಲ್ಲಿಯೂ ದುರ್ಗಾಪೂಜೆಯನ್ನು ಆಚರಿಸುವ ಮೂಲಕ ನಡೆಸಲಾಗುತ್ತದೆ. ಒಂಬತ್ತು ದಿನಗಳ ಈ ಹಬ್ಬಕ್ಕೆ ನವರಾತ್ರಿ ಎಂಬುದಾಗಿಯೂ ಕರೆಯಲಾಗುತ್ತದೆ.

ಆಯುಧಪೂಜೆ, ವಿಜಯದಶಮಿಗಳನ್ನೊಳಗೊಂಡ ಹಲವು ಹಬ್ಬದಾಚರಣೆ ಮೈಸೂರು ಪ್ರಾಂತ್ಯದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂಬುದೇ ವಿಶೇಷವಾಗಿದೆ.

ಪುರಾಣ:ಶ್ರೀರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ದುರ್ಗೆಯನ್ನು ಪೂಜಿಸಿ ವರ ಪಡೆದಿದ್ದನೆಂಬ ಕಥೆ ಇದೆ. ದುಷ್ಟ ಶಕ್ತಿಯನ್ನು ಧಮನಿಸಿದ ಶ್ರೀರಾಮನ ಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ವಿಜಯನಗರ ಸಂಸ್ಥಾನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದರೆ, ಮೈಸೂರು ಸಂಸ್ಥಾನದ ಒಡೆಯರ ಕಾಲದಲ್ಲಿ ಮನೆ, ಮನೆಗಳಲ್ಲಿಯೂ ನಾಡಹಬ್ಬವಾಗಿ ಪ್ರಚಲಿತವಾಯಿತು.

ಆಕರ್ಷಕ ಖಾಸಗಿ ದರ್ಬಾರ್:
NRB


ಮೈಸೂರು ದಸರಾ ಮಹೋತ್ಸವಕ್ಕೆ 200ವರ್ಷಗಳ ಇತಿಹಾಸವಿದ್ದು,ಅಲ್ಲದೇ ದಸರಾದಲ್ಲಿ ನಡೆಯುವ ಮಹಾರಾಜರ ಖಾಸಗಿ ದರ್ಬಾರ್ ವಿಶೇಷ ಕಾರ್ಯಕ್ರಮವಾಗಿದೆ.

ಅಂಬಾ ವಿಲಾಸ ಅರಮನೆಯಲ್ಲಿ ನವರಾತ್ರಿಯ ಒಂಬತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ದಸರಾ ಆರಂಭಕ್ಕೂ ಮುನ್ನ ನಾಲ್ಕು ಟನ್ ಭಾರದ ಮೈಸೂರಿನ ಅತ್ಯಂತ ಪುರಾತನವಾದ ರತ್ನಖಚಿತ ಸಿಂಹಾಸನವನ್ನು ಅಣಿಗೊಳಿಸಲಾಗುತ್ತದೆ. ಒಡೆಯರ್ ಮನೆತನದ ರಾಜರಾದ ಶ್ರೀಕಂಠದತ್ತ ಒಡೆಯರ್ ಪೂಜಾವಿಧಾನಗಳನ್ನು ನೆರವೇರಿಸಿ,ಸುಮಾರು ನಲವತ್ತೈದು ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಿರ್ವಹಿಸುವುದು ಸಂಪ್ರದಾಯ.