ಬಾಲಿವುಡ್ ಹಾಟ್ ಐಟಂಗರ್ಲ್ ರಾಖಿ ಸಾವಂತ್‌ಗೆ ಕೇವಲ 15 ಮತಗಳು
ಶುಕ್ರವಾರ, 16 ಮೇ 2014 (15:42 IST)
ರಾಷ್ಟ್ರೀಯ ಆಮ್ ಆದ್ಮಿ ಪಕ್ಷದ ಮುಖ್ಯಸ್ಥೆ ಬಾಲಿವುಡ್ ಹಾಟ್ ಐಟಂಗರ್ಲ್ ರಾಖಿ ಸಾವಂತ್‌ಗೆ ಲೋಕಸಭೆ
ಚುನಾವಣೆಯಲ್ಲಿ ಕೇವಲ 15 ಮತಗಳನ್ನು ಪಡೆದು ಹೀನಾಯ ಸೋಲನುಭವಿಸಿದ್ದಾರೆ.
ರಾಖಿ ಸಾವಂತ್ ಭಾರಿ ಪ್ರಮಾಣದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾಗ ಎದು
ರಾಳಿಯ ಜಂಘಾಬಲವನ್ನು ಉಡಾಯಿಸಿ
ಬಿಡುತ್ತೇನೆ ಎಂದು ಗುಡುಗಿದ್ದಳು. ಇದೀಗ 15 ಮತಗಳಾದರೂ ಬಂದವಲ್ಲ ಬಿಡು ಎಂದು ನುಲಿದಿದ್ದಾಳೆ.
ಬಾಲಿವುಡ್ ನಟ ನಟಿಯರು ರಾಖಿ ಸಾವಂತ್ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ತುಂಬಾ ಕುತೂಹಲದಿಂದ
ನಿರೀಕ್ಷಿಸುತ್ತಿದ್ದರು.
ಟ್ವಿಟ್ಟರ್ ವಿವಾದಾತ್ಮಕ ವ್ಯಕ್ತಿಯಾದ ಕಮಲ್‌ಖಾನ್ ತಮ್ಮ ಟ್ವೀಟರ್‌ನಲ್ಲಿ ಸಂದೇಶವನ್ನು ಧಾಖಲಿಸಿ ರಾಖಿ 15 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಠೇವಣಿಯನ್ನು ಕೂಡಾ ಕಳೆದುಕೊಂಡಿದ್ದಾಳೆ ಎಂದು ಲೇವಡಿ ಮಾಡಿದ್ದಾರೆ.