Share Market: ಕದನವಿರಾಮ ಬೆನ್ನಲ್ಲೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್

Krishnaveni K

ಸೋಮವಾರ, 12 ಮೇ 2025 (11:12 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಯಾಗಿ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನ ಷೇರು ಮಾರುಕಟ್ಟೆ ಡೀಟೈಲ್ಸ್ ಇಲ್ಲಿದೆ ನೋಡಿ.

ಇಂದು ಭಾರತ ಮತ್ತು ಪಾಕಿಸ್ತಾನದ ಉನ್ನತ ಮಟ್ಟದ ಮಿಲಿಟರಿ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ. ಮೊನ್ನೆ ಯುದ್ಧದ ವಾತಾವರಣವಿದ್ದಿದ್ದರಿಂದ ಷೇರು ಮಾರುಕಟ್ಟೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು.

ಆದರೆ ಈಗ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಷೇರು ಮಾರುಕಟ್ಟೆಯೂ ಮೇಲೆದ್ದಿದೆ. ಇಂದಂತೂ ಭರ್ಜರಿ ಏರಿಕೆ ಕಂಡುಬಂದಿದೆ. ಇಂದು ಸೆನ್ಸೆಕ್ಸ್ ಬರೋಬ್ಬರಿ 2,188 ಪಾಯಿಂಟ್ ಏರಿಕೆ ಕಂಡಿದ್ದು 81,643.25 ಪಾಯಿಂಟ್ ನಷ್ಟಿದೆ.

ನಿಫ್ಟಿ 50 682.6 ರಷ್ಟು ಏರಿಕೆ ಕಂಡಿದೆ. ನಿಫ್ಟಿ ಬ್ಯಾಂಕ್ 1,570 ಪಾಯಿಂಟ್ ಏರಿಕೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ 100 1684 ಪಾಯಿಂಟ್ ಏರಿಕೆಯಲ್ಲಿದೆ. ಇಂದಂತೂ ಹೂಡಿಕೆದಾರರಿಗೆ ಭರ್ಜರಿ ಲಾಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ